ಬಾಗಿಲಲ್ಲಿ ನಿಂತು
ಬಾಗಿಲಲ್ಲಿ ನಿಂತು ನೋಡುತ್ತಿರುವೆ ನನ್ನ ಬಾಳ ಸಂಗಾತಿಗೆಂದು ದಿನ ಪೂರ್ತಿ ಬಿಸಿಲಲ್ಲಿ ಭೂ ತಾಯಿಯ ಮಡಿಲಲ್ಲಿ ನಿಂತು ಕೆಲಸ ಮಾಡಿ ಬರುವನೆಂದು.............
ಊಟದಲ್ಲಿ ನೂರು ರೀತಿಯ ತಿನಿಸುಗಳನ್ನು ಮಾಡಿರುವೆ
ನನ್ನ ಪ್ರೀತಿಯ ಸವಿ ಸೇರಿರಿ ಪಾಯಸವನ್ನು ಸಿದ್ದಗೊಳಿಸಿರುವೆ ನಿನ್ನ ಮಾತಿನ ಸವಿಯ ನಾನುಂಡು ನಿನಗೆ ಉಣಬಡಿಸಲೆಂದು....................
ಕೈಯ್ಯಲ್ಲಿ ರುಮಾಲು ಕಣ್ಮುಂದೆ ತೊಟ್ಟಿಯಲ್ಲಿ ತುಂಬಿದ ನೀರು ನಿನ್ನ ಕಾಲ ತೊಳೆದು ನನ್ನ ಮನಸ ಮನೆಯೊಳಗೆ ನಿನ್ನ ಕರೆತರಲೆಂದು............
ಸಿಂಗಾರಿಸಿಕೊಂಡು ನಿನ್ನ ಒಳವ ಚಂದ್ರ ಚಕೋರಿಯಂತೆ
ಶಿಗೆಯಲ್ಲಿ ಗುಲಾಬಿ ಮುಡಿದು ತುಟಿಯಲ್ಲಿ ನಿನ್ನ ಕರೆಯುವ ಬಯಕೆ ತಡಿದು ಕಾದು ಕುಳಿತಿರುವೆ ಹೊಸಲಲ್ಲಿ ನಿನ್ನುಸಿರ ಹೆಸರಂತೆ..........
ನನ್ನೆದುರು ನಿನ್ನ ನೋಡಿ ನಿಂತು ಹೊದೆನು ನಾನು ಮಾತಿಲ್ಲದೆ ನಿನ್ನ ಮಡದಿಯಾದರು ದಿನನಿತ್ಯ ನಿನ್ನ ಜೊತೆಗೆ ಇರಲು ಬಯಸುವ ನಿನ್ನ ಪ್ರೀತಿಯ ಪ್ರೇಯಸಿ ನಾನು ಇಂದಿಗೂ ಎಂದಿಗೂ................
- ಚುಕ್ಕಿ
17 Jul 2017, 11:08 pm
Download App from Playstore: