ನೀನಿರದ ಮೇಲೆ....
ನನ್ನ ನಗುವೇನೆ ನೀನೆ
ನೀನಿರದ ಮೇಲೆ ಏನಿದ್ದರೇನೆ
ಇಲ್ಲ ಕಣೆ, ನನ್ನ ಒಳಗೆ ನಾನೆ
ಎಂದು ಬರುವೆ ನನ್ನ ಜಾಣೆ
ನೀನಿರದ ಮೇಲೆ
ನನಗೆಲ್ಲಿದೆ ನಾಳೆ
ನೀನಿದ್ದರೇನೆ ನನಗೆ ಬಾಳೆ
ನೀನಿಲ್ಲದ ನಾನು ಬರಿಯ ಸುಳ್ಳು
ನೀನಿಲ್ಲದ ಬದುಕಾಗಿದೆ ಜೊಳ್ಳು
ನೀನರದ ಮನಸು ನೋವನೆ ತುಂಬಿ ಆಗಿದೆ ಪೊಳ್ಳು
ನೆನಪುಗಳು ಚುಚ್ಚಿ ನೋಯಿಸಿವೆ ಆಗಿ ಮುಳ್ಳು
ಮನಸಾಗಿದೆ ಮನೆಯು ನಿನ್ನ ನೆನಪುಗಳಿಗೆ
ಇನ್ಯಾರಿಗು ಕೊಡಲಾರೆ ಮನಸ ಬಾಡಿಗೆಗೆ
ಅದರೊಳಗಿನ ಕನಸು ಕಾದಿವೆ ಅವುಗಳ ಒಡತಿಗೆ
ನನ್ನೀ ಉಸಿರಿಗೆ ನೀನೆ ಒಡತಿ
ನೀನಿರದೆ ನಾನಿರುವೆನೆ ಗೆಳತಿ
ತಿರುಗಿ ಬಾರೆ ನನ್ನ ಜಾಣೆ
ನಿನ್ನಗಲಿ ಬದುಕಲಾರೆ ನನ್ನ ಆಣೆ
- ಶ್ರೀಕಾವ್ಯ
18 Jul 2017, 02:44 pm
Download App from Playstore: