ಪದೇ ಪದೇ....
ಪದೇ ಪದೇ ಭಾನ ನೋಡಿ
ಕರೆದಿದೆ ಭುವಿಯು ಹಾಡಿ
ದೂರದಲಿ ಸೇರಿವೆ ಜನುಮಗಳ ಜೋಡಿ
ಹಿಂಬಾಲಿಸಲು ಮರೆಯಾಗುವರು ದೂರ ಓಡಿ
ಪ್ರೇಮ ಸಂದೇಶ ವಿನಿಮಯಿಸಿವೆ ಆ ಬಾನಾಡಿ
ತಂಪೆರೆದಿದೆ ಇಬ್ಬರಿಗೂ ಮೋಡಗಳೆಂಬ ಒಡನಾಡಿ
ಮುತ್ತಿನ ಮಳೆ ಹರಿದಿದೆ ಹನಿಗಳ ರೂಪ ಧರಿಸಿ
ಹಚ್ಚ ಹಸಿರಾಗಿಸಿರುವನು ಅವನು ಅವಳ ರಮಿಸಿ
ಬಿಸಿಲಲಿ ಕಣ್ಣಾಮುಚ್ಚಾಲೆಯಲಿ ಸುರಿಸಲು ಮುತ್ತಿನ ಮಳೆ
ಕಾಮನಬಿಲ್ಲ ಉಡುಗೊರೆಯ ಕಂಡು ರಂಗೇರುವಳು ಇಳೆ
ಅವರೊಳಗೆ ಉಳಿದಿದೆ ಎಂದಿಗೂ ಕೊನೆಯಾಗದ ಸೆಳೆತ
ಅತಿ ಸುಂದರ ಜಗದಲಿ ಅವರಿಬ್ಬರ ಮಿಳಿತ
ಇನಿಯಳಿಗಾಗಿ ಅವನು ಕೈಯ ಚಾಚೆ
ಸಂಧಿಸಿರುವರು ಇಬ್ಬರು ಅಪ್ಪಿ ಕಡಲ ಆಚೆ
ಸಮಯದ ಪರಿಮಿತಿಯೇ ಇರದೆ ಇರುವರು ಜೊತೆಗೂಡಿ
ಎಂದಿಗೂ ಇವರೆ ಒಬ್ಬರಿಗೊಬ್ಬರು ದೂರಾಗದ ಒಡನಾಡಿ
- ಶ್ರೀಕಾವ್ಯ
18 Jul 2017, 06:46 pm
Download App from Playstore: