ಮೌನದ ಸಮ್ಮತಿ

ಮೀಸೆ ಮರೆಯಲ್ಲಿ ನೀನು ನಗುವಾಗ
ಓರೆ ಕಣ್ಣಿಂದ ನಾ ನೋಡಲೇನು!!
ಕಣ್ಣ ರಪ್ಪೇಗೂ ಏನೋ ಆನಂದ
ನಾಚಿ ನೀರಾಯಿತು ನಿನ್ನನ್ನು ಕಂಡು!!

ಬಳಿ ನೀನು ಬರುವಾಗ
ಮನ‌ಕೇನೋ ಆನಂದ!!
ನಿಂತು ಬಿಟ್ಟೆ ನಾನು ಇಲ್ಲಿ
ಅರಿವಿಲ್ಲದ ಹಾಗೆ!!

ಕಾಲ ಬೆರಳು ರಂಗೋಲಿ
ಬಿಡಿಸಿತು ನೆಲದಲ್ಲಿ!!.
ನನ‌್ನ ಮುಂಗುರುಳು ಕಾದಿಹುದು
ಹಂಬಲಿಸಿ ನಿನ್ನ ಬೆರಳ!!

ಅಂಗೈಯ ಮರೆಯಲ್ಲಿ
ಅದರವದು ತಡವರಿಸಿಹುದು!!
ಏನನ್ನೂ ಹೇಳಲಾರದೇ
ಸೋತಂತೆ ಆಗಿಹುದು!!

ನನ್ನ ಮೌನದ ಉತ್ತರವೇ
ನಿನ್ನ ಎಲ್ಲ ಪ್ರಶ್ನೆಗಳಿಗೂ!!
ಏನನ್ನೂ ಕೇಳದಿರು ನೀ
ಎಲ್ಲವೂ ಸಮ್ಮತಿಯೇ ನನಗೆ!!

- ಪಿ.ಜಿ.ಜ್ಯೋತಿ

19 Jul 2017, 02:17 pm
Download App from Playstore: