ಪ್ರೀತಿಯ ನೆನಪಲಿ...

ಪ್ರೀತಿಯ ನೆನಪಲಿ
ಮನಸಿನ ಮನೆಯಲಿ
ಬಿಡಿಸಿರುವೆ ಕನಸುಗಳ ರಂಗೋಲಿ
ಕಟ್ಟಿರುವೆ ಪ್ರೀತಿ ತೂಗಲು ಅಲ್ಲೊಂದು ಜೋಕಾಲಿ
ನೀ ಬರುವ ದಾರಿಯಲ್ಲೆಲ್ಲ ಹೂವುಗಳ ಚೆಲ್ಲಿ

ನಿನ ಬಾಳಲೆಂದು ತರುವೆ ಮೃದು ಮಲ್ಲಿಗೆಯ ಕಂಪು
ನನ್ನೆದೆಯ ವನದಲಿ ನಿನಗೆಂದು ಹೊಂಗೆ ನೆರಳ ತಂಪು
ತುಂಬುವೆನು ಮನಸಿನ ಮಾತಿಗೆ ಹಕ್ಕಿಗಳ ಇಂಪು
ಕಾಯುವೆ‌‌ ನಾ ನಿನ್ನ ಪ್ರೀತಿಗೆ ತಾಗದಂತೆ ಮುಪ್ಪು

ಜಗವೇನೆ ಜರಿದು ಅಂದರೂ
ನಾವಗೋಣ ಕಿವುಡರು
ಯಾರು ಕಂಡು ನಕ್ಕರು
ನಾವಿ ಜಗದ ನೋಟಕೆ‌ ಅಂಧರು

ಬಂದರೆ ಅರಿಯದ ಎಡರು ತೊಡರು
ಜೊತೆಯಾಗಿ ನಡೆಯುವ ಪ್ರೀತಿಯೆ ನಮಗೆ ದೇವರು
ಇರುವವರೆಗೆ ಕೊನೆಯ ಉಸಿರು
ಇರಬೇಕು ಜೊತೆಗೆ ಎಂದಿಗೂ ನಾವಿಬ್ಬರು

- ಶ್ರೀಕಾವ್ಯ

20 Jul 2017, 09:37 am
Download App from Playstore: