ಕಣ್ಣಲ್ಲೆ ಕೆತ್ತಿದ ಶಿಲ್ಪ

ಶಿಲ್ಪಿಯೊಬ್ಬನು ಕಣ್ಣಲ್ಲೇ ಕೆತ್ತಿದ
ಪ್ರೇಮದ ಶಿಲ್ಪ ನೀನು!!
ಹೋಗು ನಡೆ ಎಲ್ಲರ ಕಣ್ಣಿನಲ್ಲೂ
ಪ್ರೇಮದ ಭಾವ ತುಂಬು!!

ಕವಿಯೊಬ್ಬನು ಬರಹದಲ್ಲಿ
ನಿನಗೆ ಜೀವ ತಂದ!!
ಹೋಗು ನಡೆ‌ ಎಲ್ಲರ ಪ್ರೇಮದಲ್ಲೂ
ನೀನು ‌ಜೀವ ತುಂಬು!!

ನಾಟ್ಯಕಾರನೊಬ್ಬ ಕಲಿಸಿದ
ಹಾವ ಭಾವ ನಿನ್ನಲ್ಲಿ!!
ಹೋಗು ನಡೆ ಎಲ್ಲರ ಜೀವನದಲ್ಲೂ
ಹಾವ ಭಾವ ತುಂಬು!!

ಸಂಗೀತಗಾರನ ಹಾಡಿನ ಮೋಡಿಯ
ರಸಿಕತೆ ನೀನು!!
ಹೋಗು ನಡೆ ಎಲ್ಲರ ಹಾವ ಭಾವದಲ್ಲೂ
ರಸಿಕತೆ ತುಂಬು!!

ಚಿತ್ರಕಲಾಕಾರನ ಕುಂಚದಲ್ಲಿ ಮೂಡಿದ
ಬಣ್ಣದ ಕಲೆ ನೀನು!!
ಹೋಗು ನಡೆ ಎಲ್ಲರ ರಸಿರತೆಯಲ್ಲೂ
ಬಣ್ಣವನ್ನು ತುಂಬು!!

- ಪಿ.ಜಿ.ಜ್ಯೋತಿ

20 Jul 2017, 11:29 am
Download App from Playstore: