ಕಾಣೋದಿಲ್ಲ , ಕಾಡೂದಿಲ್ಲ

ಕಾಣೋದಿಲ್ಲ , ಕಾಡೂದಿಲ್ಲ
ಕಣ್ಣು ಮುಚ್ಚಲು ನೀನೇ ಜಗವೆಲ್ಲ.
ನನ್ನ ಕಣ್ಣಿಗೂ, ನಿನ್ನ ನಗುವಿಗೂ
ಏನೊ ಅರಿಯದ ಅನುಬಂಧ
ಎಲ್ಲೂ ಕುಳಿತು ನೀ ನಗುತಿರಲು
ಕಣ್ಣಲ್ಲಿ ನಿನ್ನ ಬಿಂಭಗಳ ಸಾಲು.
ಸರಸ ವಿರಸ ಅರಿಯದ ಅದರ
ತುಸು ಪಾಠ ಹೇಳು ಬಾ
ರಸಿಕತೆಯ ಉದಯ ಮನದಲ್ಲಿ
ಈ ಬಾಳಲಿ ನೀ ಬಂದಾಗಿನಿಂದ
ತುಸು ನಾಚಿಕೆಯ ಬದಿಗೆ ಸರಿಸು
ಆಡೋಣ ಕೊಂಚ ಪ್ರೆಮದ ಆಟ.

- ಕುಮಾರ ಸಿದ್ದರಾಜ

20 Jul 2017, 01:10 pm
Download App from Playstore: