ಅಂಜಿಕೆ ಏತಕ್ಕೋ

ಸಂತೆಯ ಬೀದಿಲಿ
ಗಾಜಿನ ಬಳೆ ಕಂಡೆ!!
ಕೊಳ್ಳುವ ಮನಸಿರುವಾಗ
ಅಂಜಿಕೆ ಏತಕ್ಕೋ!!

ಸಂಪಿಗೆ ಮರದಲ್ಲಿ
ಹೂಗಳ ಪರಿ ಕಂಡೆ!!
ಮುಡಿಯುವ ಮನಸಿರುವಾಗ
ಅಂಜಿಕೆ ಏತಕ್ಕೋ!!

ಬಾಳೆಯ ಬನದಲ್ಲಿ
ಬಾಳೆಯ ಕೊನೆ ಕಂಡೆ!!
ತಿನ್ನುವ ಮನ‌ಸಿರುವಾಗ
ಅಂಜಿಕೆ ಏತಕ್ಕೋ!!

ನನ್ನಯ ಎದುರಲ್ಲಿ
ನಿನ್ನನು ನಾ ಕಂಡೆ!!
ಮೆಚ್ಚುವ ಮನಸಿರುವಾಗ
ಅಂಜಿಕೆ ಏತಕ್ಕೋ!!

- ಪಿ.ಜಿ.ಜ್ಯೋತಿ

20 Jul 2017, 03:48 pm
Download App from Playstore: