ಕವಿತೆ...........

ಅಭಿನಯಸಹಿತ ವಾಚಿಸುತ್ತಿರುವ ಅಪೂರ್ವ ದೃಶ್ಯಾವಳಿಗಳನ್ನು ಕಾಣುತ್ತಿದ್ದೇ ದಿನವಿಡೀ ನನ್ನ
ಮನಸಲ್ಲಿ ಕನಸಾಗಿ ಕಲ್ಪನೆಯಾಗಿ,ನೋವಾಗಿ ನಲಿವಾಗಿ...................

ಏತಕ್ಕೆ ಕವನವೇ ನನ್ನನು ಬಿಟ್ಟೋಗೋವ
ಆಸೆ ನಿನಗೆ ಈ ನೆಚ್ಚಿನ ಗೆಳತಿಯನ್ನು ಒಂಟಿಯಾಗಿ ನನ್ನಲ್ಲಿ ನೀನಿಲ್ಲದೆ..............

ಬೆರೆತೊಗಿರುವೆ ನಿನ್ನಲ್ಲಿನ ಭಾವನೆಯಾಗಿ ನಾನು ಮನಸ್ಸಿನ ಮಾದರಿಯ ಮಾತು ನೀನು ಹೊರಹೊಮ್ಮಿ ಬರುವೆ ಪದಗಳಂತೆ ತಿಳಿಸಲು ನನಗೆ ನಾನು ನಿನ್ನಲ್ಲೇ ಇರುವೆನೆಂದು ಕವಿತೆ..........

ಕವಿತೆ-ಕವಿ ಕಂಡ ವಿಸ್ಮಯ ತೇಜಸ್ಸಿನ ಚರಿತೆ
ನನ್ನಲ್ಲಿನ ಲೋಕಕ್ಕೆ ಒಂದು ಹೆಸರಂತೆ ಬಂದು ನನ್ನ ಅರಿತೆ ಕವಿತೆ ನೆನಿಯೇ ಮತ್ತೊಮ್ಮೆ ನನ್ನ ಬಾರೆ ನನ್ನ ನೆಚ್ಚಿನ ಸ್ನೇಹಿತೆ ಮನಸೊಳಗೆ ಮಾಧುರಿಯಂತೆ...................

- ಚುಕ್ಕಿ

20 Jul 2017, 08:04 pm
Download App from Playstore: