ಮಾತಿದ್ದು ಮೂ(ರ್ಖ)ಕರೂ..

ಟ್ರಿಣ್sss ಟ್ರಿಣ್sssಯೆಂಬ
'ಲ್ಯಾಂಡ್ ಪೋನಿ'ನ ಸದ್ದು
ಅಡಗಿ ಹೋಗಿದೆ

ಕರಿ ಎತ್ತ ಕಾಳಿಂಗ
ಬಿಳಿ ಎತ್ತ ಮಾನಿಂಗ
' ಬಾನುಲಿ'ಯ ಹಾಡು ಆರ್ತಧ್ವನಿಯಾಗಿದೆ

ಬಾರಿಸು ಕನ್ನಡ ಡಿಂಡಿಮವ
ಚಂದನ ವಾಹಿನಿಯ
ದರ್ಶನವೂ 'ದೂರ' ಸರಿದಿದೆ

ನಿಮ್ದೂ ಲೇಟರ್ ಬಂದಿದೆ
ಎಂದೂ ಹೇಳುವ
'ಅಂಚೆ'ಯಣ್ಣನ ಕೆಲಸ ಕಡಿಮೆಯಾಗಿದೆ

' ಫೇಸ್ ಬುಕೆಂಬ' ಮಾಯೆಯೂ
ಹತ್ತಿರದವರನ್ನ ದೂರಾಗಿ :
ದೂರಿದ್ದವರನ್ನ ಹತ್ತಿರವಾಗಿಸಿದೆ

ಸ್ವಂತಿಕೆ ಭಾವಚಿತ್ರದ
ಲೈಕು, ಕಾಮೆಂಟ್ ಗಳ
ಪ್ರಭಾವದ ಸ್ಪರ್ಧೆ ಹೆಚ್ಚಾಗುತ್ತಲಿದೆ

ಚಾವಡಿ,ಕಟ್ಟೆಕಲ್ಲು ಮಾತಾಡುತಿವೆ!
ಮೌನವೂ ಹೆಚ್ಚಾಗಿ
ಮಾತಿಗೆ ' ಬೇಡಿಕೆ' ಬಂದಂತಾಗಿದೆ

ಚಾಟಿಂಗ್ ಹೆಚ್ಚಾಗಿ
ಡೇಟಿಂಗ್ಸ್ ಪಿಕ್ಸಾಗಿ
ಮೊಬೈಲಾಟದಿಂದ ಮೈದಾನಗಳು ಸೊರಗುತಿವೆ

ಸ್ಮಾರ್ಟ್ಪೋನಿನ ವ್ಯಾಲ್ಯೂನ
ಇಳಿಸಿತು ಜಿಯೋ
ರುಚಿಹಚ್ಚಿ ಪಂಡಿತರನ್ನ,ಪೆದ್ದರನ್ನಾಗಿಸಿದೆ

ಸತ್ಯವೂ ದೂರಾಗಿ
ಕುಚೇಷ್ಟೆ,ಹುಚ್ಚುನಗೆಗಳು ಅತಿಯಾಗಿ
ಮಾತಿದ್ದು " ಮೂ( ರ್ಖ)ಕ" ರಂತೆ ವರ್ತಿಸುವುದಾಗಿದೆ.

- ಅಶೋಕ.ಜಿ.ಕಮತಗಿ (ಶಾಂತಿಪ್ರಿಯ)

- "ಶಾಂತಿಪ್ರಿಯ"

20 Jul 2017, 08:31 pm
Download App from Playstore: