ಮಂಜಿನ ಪ್ರೀತಿ
ಮಂಜಿನಂತೆ ಹೊಳೆದು ಬಂದೆ
ತಂದು ಸುರಿದೆ ಪ್ರೀತಿಯ ತಂಪನು!!
ಪ್ರೀತಿಯ ಹೊದಿಕೆ ಹೊದ್ದು ನಿಂತೆ
ನಾ ಮರೆತು ಮಂಜಿನ ಗುಣವನು!!
ಕೊರೆವ ಚಳಿಯ ತಾಳಲಾರೆನು
ನಿನ್ನ ಅಗಲಿ ನಾ ಬಾಳಲಾರೆನು!!
ಮೈ ಕೊಚ್ಚಾದರೂ ಸರಿ ಎಂದು
ನಿನ್ನ ಸನಿಹ ಬಯಸಿ ನಾ ಇದ್ದೆ!!
ನಿನ್ನ ಸ್ನೇಹದ ಸಲಿಗೆಯನ್ನು
ಅರಿತು ಸಂಭ್ರಮಿಸುವು ಗಳಿಗೆಯು!!
ಕರಗಿಹೋಯ್ತು ಮರಳದಂತೆ
ನಾ ಹೊದ್ದ ಮಂಜಿನ ಪ್ರೀತಿಯು!!
- ಪಿ.ಜಿ.ಜ್ಯೋತಿ
21 Jul 2017, 10:11 am
Download App from Playstore: