ವೀಣೆಯ ನಾಧ

ಮುಂಜಾನೆ ಮಂಜಿನ‌
ಹನಿಗಳ ತುಂತುರು
ಚುಂಬಿಸಿತು ವೀಣೆಯ
ತಂತಿಯ ಸ್ವರಗಳ!!

ಮಧ್ಯಾಹ್ನ ದುಂಬಿಯ
ನಾಧದ ಝೇಂಕಾರ
ಬೆರೆಯಿತು ವೀಣೆಯ
ಸ್ವರಗಳ‌ ಜೊತೆಯಲಿ!!

ಸಂಜೆಯಲಿ ಪಡುವಣ
ಸೂರ್ಯನ ಕಿರಣವು
ಸ್ಪರ್ಶಿಸಲು ಸುಮಧುರ
ನಾಧದ ಕಂಪನ!!

ರಾತ್ರಿಯಲಿ ಚಂದ್ರನ
ಬೆಳಕಿನ‌ ತಂಪಲಿ
ಹೆಚ್ಚಿಸಿತು ವೀಣೆಯು
ನಾಧದ ಇಂಪನು!!

- ಪಿ.ಜಿ.ಜ್ಯೋತಿ

21 Jul 2017, 10:41 am
Download App from Playstore: