ನನ್ನ ಜೀವನ

ಬರೆದೆನೊಂದು ಪುಟ್ಟ ಕವಿತೆ
ಅದೊಂದು ಹಚ್ಚಳಿಯದ ನೆನಪುಗಳ ಸಂತೆ

ಓರೆಗಚ್ಚಿ ಬಿಟ್ಟ ಕನಸ ಹೆಕ್ಕಿ-ಹೆಕ್ಕಿ ತಂದ ನೆನಪು
ಇರುಳ ಮಾಮ ಆ ಕನಸಿಗೆಲ್ಲಾ ಹೆಚ್ಚಿಸಿದನು ಬೆಳ್ಳಿ ಹೊಳಪು

ಶುಭ ವೇಳೆಯಲಿ ನಡೆದ ಘಟನೆ ಮರೆವ ಘಳಿಗೆ
ಆದರೇಕೋ ಮನದ ಮೇಲೆ
ಮಳೆಯ ಸುರಿಸುವಾಸೆ ಆ ಕಾರ್ಮುಗಿಲಿಗೆ

ಕಹಿ ಘಳಿಗೆಯಲಿ ನಡೆದ ಮಾತೊಂದು
ಅದಕ್ಕೆ ಜೊತೆಯಾದ ಮಾತುಗಳು ನೂರೊಂದು
ಅವರ ಮಾತಿನ ವೀಣೆಯಲಿ
ಸಿಗಲಿಲ್ಲ ಇವರ ಮಾತಿಗೆ ಮನ್ನಣೆ

ಜೀವಗಳೆರೆಡೂ ಮುಖ್ಯ ಎಲ್ಲರ ಬಾಳಲ್ಲೂ
ಅದನುಳಿಸಲಿಕ್ಕಾಗಿ ಪ್ರತಿದಿನ ಹೋರಾಟ ಅವರವರ ಮನದ ಮೂಲೆಯಲ್ಲಿ
ಇವರಿರ್ವರ ಪ್ರೀತಿಗೆ ಮಾತ್ರ ಎಂದಿಗೂ ಮೋಸವಿಲ್ಲ

ಮನವ ಕಲಕುವಾಸೆಯಿಲ್ಲ ಇಲ್ಲಾರಿಗೂ
ತುಸು ಕೋಪ, ಈ ರೀತಿ ಮಾಡಿತು ಎರಡು ಮನಗಳಿಗೂ ಒಂದು ಮನ ಅದ ಸಂತೈಸಲೂ ಬಂದು ಬರಿಗೈಲಿ ಹೋಯಿತು

ಕೆಣಕದಿರು ಮನವೇ ಹಿಂದಿನ ಕಹಿಘಟನೆಗಳ ಅದರಿಂದ ಪ್ರಯೋಜನವಾದದ್ದು ಯಾರಿಗೂ ಇಲ್ಲ ತೆಗೆದು ನೋಡು ಇತಿಹಾಸದ ಪುಟಗಳ

ಮನವ ಕೆಡಿಸಿ ಸಂಬಂಧಗಳ ನಡುವೆ ಗೋಡೆ ಕಟ್ಟುವ ಬದಲು, ಸಂಬಂಧಗಳ ನಡುವೆ (ನಂಬಿಕೆಗೆ ಅರ್ಹರಾದವರಿಗೆ ಮಾತ್ರ) ಸೇತುವೆಯ ಕಟ್ಟು ಹೆಚ್ಚುವುದಾಗ ಪ್ರೀತಿಯ ಅಮಲು...

ಮುಗಿಯಿತು ನೆನಪುಗಳ ಸಂತೆಯ ಹೋರಣ
ಆ ನೆನಪಿನ ಮಾತಿಗೆ ಹುಡುಕಬೇಡಿ ಕಾರಣ
ಇರುವಷ್ಟು ದಿನ ಕಹಿ ಘಟನೆ ಮರೆತು ಹ್ಯಾಪಿಯಾಗಿರೋಣ
ಕನಸಿನೂರಿನ ಪಯಣಿಗ ಶಿವಾನಂದ.ಆರ್ ನಲ್ಲ ಶಿವು

- shivanandarnallashivu

22 Jul 2017, 08:29 am
Download App from Playstore: