ಬಯಸದೆ ಸಿಕ್ಕಿತು ಈ ಕಾಯ...
ಬಯಸದೆ ಸಿಕ್ಕಿತು ಈ ಕಾಯ
ಅದರೊಳಗೊಂದು ಮನಸೆಂಬ ಮಾಯ
ಕನಸ ಕಂಡು ಕುಪ್ಪಳಿಸುವುದು ಇಲ್ಲದೆ ಲಯ
ಕಣ್ಣೀರ ಸುರಿಸುವುದು ಮಾಡಿಗೊಂಡು ಗಾಯ
ಮಾನವಜನ್ಮ ಸಿಗಲು ಮಾಡಿರಬೇಕಂತೆ ಪುಣ್ಯ
ಎದುರಿಸಿ ಗೆಲಬೇಕಂತೆ ಬಂದರು ಎಂಥದೆ ಕಷ್ಟ ಕಾರ್ಪಣ್ಯ
ಬದುಕಿ ತೋರಿಸಬೇಕು ಕಾಯವಾಗಬೇಕಾದರೆ ಸಾರ್ಥಕ
ನೊಂದು ನೋಯಿಸಿ ಬದುಕಿದರೆ ಜೀವನವು ನಿರರ್ಥಕ
ಮನಸ ಸಂತಸದಿಂದಿರಿಸುವುದಂತೆ ನಿಜ ಬದುಕು
ನಗುವುದೇಗೆ ಮನಸೆ ಮುರಿದು ಆದರೆ ಒಡಕು
ಮತ್ತೆ ಹೇಳಿತು ನೊಂದ ಮನಸು ನಗುವಿಗೆ ಹುಡುಕು ದಾರಿ
ಸಂತಸದಿಂದಿರಲು ಪ್ರಯತ್ನಿಸುತಿರಲೆ ಬೇಕು ಬಾರಿ ಬಾರಿ
- ಶ್ರೀಕಾವ್ಯ
22 Jul 2017, 09:39 am
Download App from Playstore: