" ಊರು ಬಿಟ್ಟು ಬಂದವರು..! "

ಅವ್ವಾ,ಶುಭ- ಸಮಾರಂಭಗಳಲ್ಲಿ
ಅಕ್ಕ- ಪಕ್ಕದವರು
ನಮ್ಮನ್ನು ಜಾಸ್ತಿ ಕರೆಯಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಮ್ಮ ಕೆಲಸ,ನಮ್ಮ ಪಾಲಿಗೆ
ನಾವೇ ಅಂತ್,ಬದುಕಿದರೂ
ಜನರು ಆಡಿಕೊಳ್ಳತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಮ್ಮ ಜೀವನಶೈಲಿ ಸಹಿಸದವರು
ನಾವು ತಪ್ಪು ಮಾಡದಿದ್ದರೂ
ನಮ್ಮನ್ನೇ ಅಪರಾಧಿ ಸ್ಥಾನದಲ್ಲಿರುಸುತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಾವೆಲ್ಲರೂ ಬದಲಾಗಬೇಕು
ಊರು ಅಭಿವೃದ್ಧಿಯಾಗಬೇಕೇಂದ್ರೇ
ಅದನೆಲ್ಲಾ,ನಿಮ್ಮೂರಲ್ಲಿ ನಡೆಸಿ ಅಂತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ಮಗನಿಗೆ ಉತ್ತರಿಸಿದ ತಾಯಿ,
ಹೌದಪ್ಪಾ,ಎಲ್ಲರೂ ಹೊಟ್ಟೆ- ಬಟ್ಟೆಗಾಗಿ
ಅರಸೀ ಬಂದವರೆ..
ಹೊನ್ನು,ಮಣ್ಣು, ಹೆಣ್ಣಿನಾಸೆಗಾಗಿ
ಒಂದೆಡೆ ನೆಲೆಸಿ ನಿಂತವರೇ.
ಅವರವರ ಮೂಲ ಆ " ಹ್ಯೆಳುವ" ಗೆ ಮಾತ್ರ ಗೊತ್ತು!

ಮತಯಾಚನೆಗೆ ಬರುವಾಗ
ಸಹಾಯವನ್ನು ಕೇಳುವಾಗ
ಸೇವೆಯನ್ನು ಪಡೆಯುವಾಗ
" ಊರು ಬಿಟ್ಟು ಬಂದವ್ರು" ಅಂದವರೇ
ಅದನ್ನೆಲ್ಲಾ ಮರೆತು ಬರ್ತಾರಲ್ಲ ಅದೇ ದೊಡ್ಡದು!

ಎಲ್ಲರೂ ಅವರವರ ಮೂಲನೆಲೆಗೆ ಹೋದ್ರೆ
ಇಲ್ಲಿ ಇರುವವರಾದರೂ ಯಾರು..?
' ಊರೆಂದು' ಕರೆಯಿಸಿಕೊಳ್ಳುವುದು ಹೇಗೆ?
ಒಂದೇ ಕೈಯಿಂದ ಚಪ್ಪಾಳೆ ತಟ್ಟುವವರಿಗೆ
ಇವನ್ನೆಲ್ಲಾ ಕೇಳೆಂದಳು ತಾಯಿ, ಮಗನಿಗೆ..!

- ಅಶೋಕ.ಜಿ.ಕಮತಗಿ ( ಶಾಂತಿಪ್ರಿಯ)

- "ಶಾಂತಿಪ್ರಿಯ"

22 Jul 2017, 10:03 am
Download App from Playstore: