ಅಪರೂಪದ ಅರಗಿಣಿ
ಅಪರೂಪದ ಅರಗಿಣಿ
ಮೂರೋತ್ತು ಅಳುತ್ತಿದೆ.
ಅಂತಸ್ತಿನ ಆಸೆ
ನನಗಿಲ್ಲ ಅಂತಿದೆ.
ಬಂಗಾರದ ಪಂಜರ
ತನಗೇತಕೆ ಅನ್ನುತ್ತಿದೆ.
ಅದರೊಳಗೆ ಕುಳಿತರೆ
ಉಸಿರಾಡುತ್ತಿಲ್ಲ ಎನ್ನುತ್ತಿದೆ.
ಆಕಾಶದೆತ್ತರಕ್ಕೆ ಆರುವ
ಆಸೆ ಅರಗಿಣಿಗೆ ಆಗಿದೆ.
ಸಂಗಡಿಗರೊಡನೆ ಆಟವಾಡುವ
ಬಯಕೆಯಾಗಿದೆ.
ವಸಂತದ ಚಿಗುರು
ಸವಿಯಲು ಸಿದ್ಧವಾಗಿದೆ.
ಸ್ವಾತಂತ್ರ್ಯ ಕೊಡಲೆಂದು
ಮಾಲೀಕನ ಬೇಡುತ್ತಿದೆ.
ಆಸೆ ಹಿಡೇರದ ಅಪರೂಪದ
ಅರಗಿಣಿ ತನ್ನ ಕೊನೆಯುಸಿರೆಳೆದು
ಆ ಬಂಗಾರದ ಪಂಜರಕ್ಕೆ ಬಲಿಯಾಗಿ ಹೋಗಿದೆ.
- ಚುಕ್ಕಿ
22 Jul 2017, 04:41 pm
Download App from Playstore: