ಸ್ವಲ್ಪ ಹೊತ್ತು

ಇನ್ನು ಸ್ವಲ್ಪ ಹೊತ್ತು ಇರು ನನ್ನ ಮುಂದೆಯೇ
ನಿನ್ನ ಕಣ್ಣ ತುಂಬಾ ನೋಡಿ ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇನೆ..............

ಮನಸು ನಿನ್ನ ಹುಡುಕಿದಾಗ ಕಣ್ಣಿಂದ ತೋರಲು ನನಗಿನಿತು ಸುಲಭವಾಗುವುದು ಚೆಲುವಾದ ನಿನ್ನ ನಗುವನ್ನು...............

ಎಷ್ಟೊತ್ತು ಕಣ್ಣ ರೆಪ್ಪೆ ಕೆಳಗಿಳಿಸದೆ ನೋಡಿದರೂ
ಎದೆಬಡಿತ ಎಡಬಿಡದೆ ಕೇಳುವುದು ನನ್ನ ಮತ್ತೆ ಮತ್ತೆ ನಿನ್ನ ತೋರಿಸೆಂದು..............

ನನ್ನ ಬಿಟ್ಟು ಹೋಗುವೇನೆಂದರೆ ನೀನು ತುಂಬಿರುವ ನನ್ನ ಮನಸು ನಿನಗನುಮತಿ ನೀಡುವುದಿಲ್ಲ..............

- ಚುಕ್ಕಿ

22 Jul 2017, 06:39 pm
Download App from Playstore: