ಕಳೆದೊದ ನೆನಪುಗಳು
ತೊಟ್ಟ ಬಟ್ಟೆಯಲ್ಲೆ ಮುಂಜಾನೆ , ಎದ್ದು ಅಪ್ಪನ ಹಿಂದೆ ಓಡುತ್ತಿದ್ದೆ
ಗದ್ದೆಯ ದಂಡೆಯ ನಡುವೆ, ಹುಲ್ಲು ಬೆಳೆದ ತೋಟದ ಒಳಗೆ...ಪಕ್ಕದಲ್ಲಿ ಹರಿಯುವ ತೋಡಿನ ಕಡೆಗೆ....ಅಲ್ಲೆ ತಣ್ಣೀರಲ್ಲಿ ಮಿಂದೆದ್ದು , ಬಾಲೆ ಎಲೆಯ ಮೇಲಿಟ್ಟ ಪೂಜಾ ಕಾರ್ಯಕ್ಕೆ ಕೈ ಮುಗಿದು.. ಹಣೆಗೆ ಗಂಧವನಿಟ್ಟ ಅಪ್ಪ...ಕೈ ಮುಗಿದು ನೀರ ಮೇಲೆ ಅದನ ತೇಲಿ ಬಿಟ್ಟ....!!
ತಿರುಗಿ ನೋಡದೆ ಸುರಿದ ಮಳೆಗೆ ಮೈಯೊಡ್ಡಿ ಮನೆ ಸೇರಿದಾಗ...ಅಮ್ಮ ರೆಡಿಯಾಗಿದ್ರು ಕಷಾಯ ಹಿಡಿದು..!!
ಕಹಿ ಎಂದೂ ಬೊಬ್ಬೆ ಹೊಡೆಯುವಂತಿಲ್ಲ ಕುಡಿಯ ಬೇಕು ಕಣ್ಣು ಮುಚ್ಚಿ...ಆ ಮೇಲೆ ಹೊಟ್ಟೆ .. ಉಪ್ಪಿಟ್ಟು, ಪುಂಡಿ ಗಸಿ... ಮನೆಯೊಳಗೆ ಎಲ್ಲ ಮುಗಿದ ಮೇಲೆ ಇಲ್ಲೆನಿದೆ ನಿನಗೆ ನಡಿ ದೇವರ ಸನ್ನಿಧಿಗೆ ಎಂದು ಸುಮ್ಮನೆ ನಡೆದು ಹೋಗುತ್ತಿದ್ದೆವು ದೇವಾಸ್ಥಾನಕ್ಕೆ...
ಓ.....ದೇವರೆ ಬರಬಾರದೆ ಮತ್ತೊಮ್ಮೆ ಆ ಬಾಲ್ಯದ ದಿನಗಳು....
ದರಿದ್ರ ಬದುಕಿನಲಿ ಬ್ಯೂಸಿಯಾದ ಕೆಲಸದಲ್ಲಿ ದೇವಾಲಯಕ್ಕೆ ಇರಲಿ ಮನೆಗೂ ಹೋಗಲಾಗಲಿಲ್ಲವಲ್ಲ....!!
- ಎಸ್.ಬಿ
22 Jul 2017, 11:22 pm
Download App from Playstore: