ನಾ ನಿನ್ನ ಮನವೆ..
ನಿನ್ನ ಅಂಗೈಯಲೆ ನಾನು ಇರುವೆ
ಏತಕೆ ಎಲ್ಲೆಲೊ ನೀ ನನ್ನ ಹುಡುಕುವೆ
ನಿನ್ನೊಳಗೆ ನಾ ಸೇರಿ ಹೋಗಿರುವೆ
ನೀ ಕೊಟ್ಟ ರೂಪವನೆ ನಾ ಪಡೆಯುವೆ
ಏತಕೆ ನೀ ಕೊರಗಿ ಸೊರಗುವೆ ಓ ಜೀವವೆ
ನಿನ್ನೊಳಗೆ ನೀ ಕೊಟ್ಟ ರೂಪವು ನನ್ನದು
ನಾ ಪಡೆದ ರೂಪವೆ ಈ ಜಗಕೆಂದು ನಿನ್ನದು
ನೀ ನೋಡುವ ಬದುಕೆ ಪಾಠವು ನನಗೆ
ನಾ ಕಲಿತದ್ದೆಲ್ಲ ತಿಳಿಸಿ ದಾರಿ ತೋರುವೆ ನಾ ನಿನಗೆ
ನೀ ನಕ್ಕರೆ ನಾನೂ ನಗುವೆ
ನಿನಗೆ ಮುದ್ದು ಸಿಕ್ಕರೆ ನಾನು ಮಗುವೆ
ನೀ ಅತ್ತರೆ ನಾನು ಹೇಗೆ ನಗುವೆ?
ನಾನು ಎಂದಿಗೂ ನಿನ್ನ ಜೊತೆಯಿರುವ ನಿನ್ನ ಮನವೆ..
- ಶ್ರೀಕಾವ್ಯ
23 Jul 2017, 10:06 am
Download App from Playstore: