ನಿನ್ನಂದವೆ ನನ್ನ ಕಲ್ಪನೆಯ ಬರವಣಿಗೆ
ಚೆಲುವ ಮೊಗದಲ್ಲಿ ಚಂದಮಾಮ ಹೊಳೆದಂತೇ
ನಿನ್ನ ಕಣ್ಣ ಕಡಲಲ್ಲಿ ಹುಣ್ಣಿಮೆಯ ಬೆಳಕು ಬಂದಂತೆ
ನಿನ್ನ ಕೇಶವು ಜೋಗದ ಝರಿ ಝರಿ ಹರಿದಂತೆ
ಮುಗ್ಗುತಿ ಮೂಗಿಗೆ ಗಿನಿರಾಯ ಹೋಲಿಸಿದಂತೆ
ನಿನ್ನಂದವೇ ನನ್ನ ಕಲ್ಪನೆಯ ಬರವಣಿಗೆ.....
ಜಿನುಗೊ ಮಂಜಿನಾ ಹನಿ ಹನಿಯಲು ನಿನ್ನ ಹೆಸರ ನಾ ಬರೆಯಲೇ
ನಿನ್ನ ಮಾತಿನಾ ಶೈಲಿ ಮುತ್ತುದುರಿ ಹೂವಾದಂತೆ
ನಿನ್ನ ತುಟಿಯ ಅಂಚಿನಲ್ಲಿ ಸಿಹಿಜೇನ ದಂಡು ಅಡಗಿದಂತೆ
ಅಂದದ ಅರಮನೆಯಲ್ಲಿ ಅಂದಾಮಿರೋ ಮಾಯಾಗತಿ ನಿನಾದಂತೆ
ನಿನ್ನಚೆಲುವು ನನ್ನ ಮೂಲ ಮಾದರಿಯ ಮೆರವಣಿಗೆ........
ಒಲವಕವಿ ಕಾಯ್ಕಿಣಿಯ ಪದಗಳಿಗು ನಿಲುಕದ
ಒಲವಿನ ಓಲೇ ನಿನಾದಂತೆ
ನಿನ್ನ ವ್ಯಯರಾ ಹಂಪೆ ಕಲ್ಲುಸಂಗೀತ ಕರಗಿಸೋ ಮಹಲಿನಂತೆ
ಕರಿಮೋಡ ಕವಿದಾಗ ಕರಗಿಸೋ ಕಾಮಾಕ್ಷಿ ನಿನಾದಂತೆ
ನಿನ್ನೊಲುಮೆ ನನ್ನ ಮನದ ಪದವಣಿಕೆ...
ಬಿರುಸಾದ ನನ್ನ ಮನವ ಜಾರಿತೋ
ಮೃದು ಭಾವನೆಯ ಸನಿಹ ನಾ...
ನಿನ್ನ ರೂಪದ ಕಲ್ಪನೆಯೇ ಇದಕೆಲ್ಲ ಕಾರಣ...
- ಪ್ರದೀಪ.ಮ.ಪಾಡಮುಖೆ
23 Jul 2017, 10:53 am
Download App from Playstore: