ನಯನ

ಮೂರಕ್ಷರದ ಮುದ್ದಾದ
ತಾರೆಯು ನೀನು
ಪಂಚೇಂದ್ರಿಗಳಲ್ಲಿ ಒಂದಾದ
ನಿನ್ನ ಆಶ್ರಯಿಸಿರುವೆ ನಾನು

ಚಿಗುರೊಡೆದ ತರು- ಲತೆಗಳ
ಚಂದನದ ವನ- ಬನಗಳ
ಸೌಂದರ್ಯ ಸವಿಯುವೆ
ನಿನ್ನಿಂದ ನಾ ನೋಡುತ್ತ

ಮಾಮರಗಳಲಿ ಮನೆಮಾಡಿ
ಬಳಗದವರೊಡಗೂಡಿ
ಆಡಿ ನಲಿವ ಪಕ್ಷಿ ಸಂಕುಲಗಳ
ಆನಂದವ ನೋಡಿ ನಲಿವೆ ನಿನ್ನಿಂದ

ಗತಕಾಲದ ಘಟನೆಗಳ
ಸಾರುವ ಶಿಲ್ಪಕಲೆಗಳ
ಇತಿಹಾಸ ಸಾರುವ ತಾಣಗಳ
ಸೌಂದರ್ಯ ಉಣಿಸುವೆ ನೀ ಎನಗೆ

ನೀನಿಲ್ಲದೆ ಈ ಬದುಕು ಶೂನ್ಯ
ನಿನಗೆ ನೀನೆ ಅನನ್ಯ
ನೀನೊಂದು ಅನಗ್ರ್ಯರತ್ನ
ನಿನ್ನ ರಕ್ಷಣೆಯತ್ತ ನಮ್ಮ ಪ್ರಯತ್ನ



ಶಾರಧ

- ಶಕುಂತಲಾ

23 Jul 2017, 12:49 pm
Download App from Playstore: