ಮನಸಿದು ರಿಂಗಣಿಸುತಿದೆ...
ಮನಸಿದು ರಿಂಗಣಿಸುತಿದೆ
ಕೂಗಿ ಹೇಳುತ ನಿನ್ನದೆ ಹೆಸರ
ನನ್ನೊಳಗಿನ ನಾನೆ ತಿಳಿಯದಾಗಿದೆ
ಕದ್ದು ಹೋಗಿರಲು ನೀನು ನನ್ನಯ ಉಸಿರ
ನೀನಂತು ಮನಸಲಿ ಅತಿ ಪ್ರಭಾವಿ
ಎದುರಿಸಲಾರೆ ನಾನಂತು ಅನನುಭವಿ
ನಿನ್ನ ಹೆಸರ ಗುನುಗುವುದೆ ಆಗಿದೆ ಖಯಾಲಿ
ಹೀಗೂ ಉಂಟೆ ಪ್ರೀತಿಯ ಮಾಯೆಯಲಿ
ಜಾರುವ ಮುಂಗುರುಳಿಗೂ ನಿನ್ನಲೆ ಸೆಳೆತ
ಮೈ ಸವರಿದ ಗಾಳಿಯಲಿ ನಿನ್ನದೇ ಉಸಿರಿನ ಮಿಳಿತ
ನಿನ್ನದೇ ಮೊಗವು ನಡೆದಾಡುವ ದಾರಿಯಲಿ
ದಿಟ್ಟಿಸಿ ನೋಡುವವರಿಗೆ ಏನೆಂದು ಹೇಳಲಿ
ಬೇಡವೆಂದರು ಬಿಡದು ನಿನ್ನಯ ಮಾಯೆ
ದೂರ ಸರಿಸವುದು ಹೇಗೆ ನಾನು ನಿನ್ನಯ ಛಾಯೆ
ಹುಡುಕಲೇನು ನಿನ್ನ ಬದುಕಲೆ ನನ್ನ ಸುಖ
ಉತ್ತರಿಸುವವರು ಇಲ್ಲಿ ಯಾರಿಲ್ಲ ನನ್ನ ಸಖ
- ಶ್ರೀಕಾವ್ಯ
23 Jul 2017, 03:02 pm
Download App from Playstore: