ಗಳಿಗೆ ತಡಮಾಡು ಒಡೆಯ

ಉಸಿರಿನಂತೆ ಸರ್ವಾಂತರ್ಯಾಮಿಯಾದ ಸಾವೇ ನೋವಾದ ಅರಿವಾಗದೆ ಆರಿಸಿಕೋ ತಂದೆ

ಎಲೆ ಉದುರುವಷ್ಟು ಹಗುರವಾಗಿ ಇಬ್ಬನಿ ಕರಗುವಷ್ಟು ಹಿತವಾಗಿ ಬಿಡಿಸಿಕೋ ತಂದೆ ನಿನ್ನ ಬನದ ಕುಸುಮಗಳನು

ಆಡಲು ಬಿಟ್ಟು ಬೆನ್ನ ಹಿಂದೆಯೇ ನಿಂತಿರುವೆ ತುಸು ತಾಳು ತಂದೆ ಕರುಳಿಗೊಂದು ಪದ ಕಟ್ಟಿಬಿಡುವ

ಪ್ರಶಾಂತ ಕಡಲಾದ ನಿನ್ನೆಡೆಗೆ ನಾನೂ ಹರಿಯಲೇಬೇಕು ಎಲ್ಲ ನದಿಗಳಂತೆ ಅವಳೊಡನೆ ಮಾತೊಂದು ಬಾಕಿಯಿದೆ ಗಳಿಗೆ ತಡಮಾಡು ಒಡೆಯ


# ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ

- ದೊಡ್ಡಕಲ್ಲಹಳ್ಳಿನಾರಾಯಣಪ್ಪ

23 Jul 2017, 05:42 pm
Download App from Playstore: