"ಒಡೆದು ಚೂರಾದ ದರ್ಪಣ"...

ಗೆಳತಿ/ಯ...

ಕದ್ದುಮುಚ್ಚಿದ ನೋಟದ ಹೋರಾಟಕ್ಕೆ
ನೀ ಕೊಟ್ಟೆ ನ್ಯಾಯ,
ಅಲ್ಲಿಂದ ಶುರು ನಮ್ಮ ಪ್ರೀತಿಯ ವ್ಯವಸಾಯ,
ಬೆಳೆದು ನಿಂತ ಪೈರಂತೆ ನಮ್ಮಿಬ್ಬರ ನೆನಪುಗಳ ಪರಿಚಯ.

ಎಲ್ಲೇ ನೋಡು ಹಳೆಯ ನೆನಪಿನ ಗುರುತು,
ಬಾಳೋದೇಗೆ ಎಲ್ಲಾ ಮರೆತು,
ಬಯಸದೆ ಇತ್ತು ಎಲ್ಲಾ ಅಂದು,
ಬೇಡಿದರೂ ಏನೂ ಇಲ್ಲ ಇಂದು.

ಈಜುವುದೇಗೆ ಹರಿಯೊ ನದಿಯ,
ನಾ ಹೇಗೆ ಸಾಗಿಸಲಿ ನೀನಿಲ್ಲದ ಬದುಕಿನ ಬಂಡಿಯ,
ಮರೆತ್ತಿಲ್ಲ ನನಗಾಗಿ ನೀ ಕೊಟ್ಟ
ನಿನ್ನ ಈ ಪ್ರೀತಿಯ.

ನನ್ನ ಮನದ ಬೇಸರದ ಈ ದಿನ,
ಊಹಿಸಲಾರೆ ನೀ ನನ್ನ ಬಿಟ್ಟು ಹೋದ
ಆ ಕ್ಷಣ,
ಕಾಡುತಿದೆ ನನ್ನ ಮನದಲ್ಲಿ ಇಂದಿಗೂ ಅದೇ ಪ್ರತಿ ದಿನ, ಪ್ರತಿ ಕ್ಷಣ,
ಗೆಳತಿ ನೀನಿಲ್ಲದ ನನ್ನ ಈ ಜೀವನ ,

"ಒಡೆದು ಚೂರಾದ ದರ್ಪಣ"...

Spb..@#

- Spb...@#

23 Jul 2017, 05:58 pm
Download App from Playstore: