ಮಳೆಗೆ ಮನುಷ್ಯನ ಆಲಾಪವೇನ!

ಕಣ್ಣೀರ ಇಟ್ಟರೇನ
ಪನ್ನೀರ ಮಡಿಯಾದರೇನ
ಎಲ್ಲಾ ದೇವರ ಪೂಜಿಸಿದರೇನ
ವರುಣ ಧರೆಗಿಳಿದು ಬರುವನೇನ

ನಾವು ಬೇಡಂದರ ಬಿಡತಾನೇನ
ಬಾ ಎಂದರ ಬರತಾನೇನ
ಬದುಕಿಗೆ ಅವನೆ ಆಧಾರಲ್ವೇನ
ಅವನಿಲ್ಲೆಂದರ ನಾವು ಎಲ್ಲಿತನ ಇರತಿವಿಯೇನ

ಅವನು ಬಂದರ ಹರ್ಷವೇನ
ಅತಿಯಾದರೆ ತೆಗಳಿಕೆಯೇನ
ಎಲ್ಲರಿಗೂ ಅವನು ಇಲ್ಲಾಂದರ ಕಷ್ಟಾನ
ಅವನು ಆಗತಾನೋ ಇಲ್ಲೋ ಅಂತ ಸಂಶೇನ

ಮಳೆರಾಯ ಮಾತ್ರ ಯಾರದ ಕೈಯಾಗ ಇರದವನ!
ನರಜೀವ ಅವನಿಗಾಗಿ ಕೋರಗುವದೇನ
ಧರೆಗೆ ಬಾ ಎಂದು ಹಂಬಲಿಸುವದೇನ
ಹಿರೇಉಳ್ಳಿಗೇರಿ ಕರೆಮ್ಮ ನಿನೇ ಕಾಪಾಡು ನಮ್ಮ ಇನ್ನ!

- MB

23 Jul 2017, 11:36 pm
Download App from Playstore: