ಭಾರತೀ
ತಾನಿಂದು ತನ್ನವರ ನೋವೆಲ್ಲಾ
ತನ್ನದೆಂದು ತಿಳಿದು ನರಳುತಿಹಳು
ಈ ಭಾರತಿ ಮೂಕಳಾಗಿ.
ಎಲ್ಲ ಭಾಷೆಗಳಿಗೆ ಏಕ ಲೇಖನವಾಗಿ
ಸಂಪ್ರದಾಯಗಳಿಗೆ ಸಾಮ್ರಾಗ್ನಿಯಾಗಿ
ಉಡುಪುಗಳಲ್ಲಿ ಹೊಸದಾದ ಹೊಳಪಾಗಿ
ಕಂಗೊಳಿಸುತ್ತಿರುವಳು.
ತನ್ನ ವಿಶಾಲವಾದ ಒಡಲಲ್ಲಿ ಬಂದವರ ಬರುವವರ ಅಸ್ತಿತ್ವಕ್ಕೆ ಒಂದು ಹೆಸರು
ಕೊಡುವಳು ಭಾರತಿಯರೆಂದು.
ಎಷ್ಟು ಉದಾರಿ ಆದರೂ ಇವಳ ಒಡಲಳಲ್ಲಿ
ಕಿಚ್ಚು ಹಚ್ಚುವವರು ಮಾತ್ರ ತಾನೆತ್ತ ಮಕ್ಕಳೇ.
ಸ್ವದೇಶವ ತೊರೆದು ವಿದೇಶದಲ್ಲಿ ಕಾಲಿಡುವ ಆಸೆ ಇವರಿಗೆ ಅವರಿಟ್ಟ ಎಂಜಲುಂಡು ಕಾಲು ತೊಳೆಯುವಾಸೆ.
ತಾಯಿಯಾ ಕಣ್ಣೀರೊರಿಸಿ ತಾವು ಕಲಿತ ವಿದ್ಯೆಯನ್ನು ತನ್ನ ದೇಶದ ಹಿರಿಮೆಯ ಹೆಚ್ಚಿಸಲು
ಬಳಸದೆ ವಿದ್ಯಾವಂತರ ನೆಲವೆಂದಿಗೂ ಪರಕೀಯ ಪಾದಗಳಿಗೆಂದು ಪರೆದಾಡುವರು ಈ ದೇಶ ದ್ರೋಹಿಗಳು ನಮ್ಮವರೆಂಬ ಮುಸುಕನ್ನು ಹಾಕಿಕೊಂಡು.
ಇವೆಲ್ಲವೂ ತಿಳಿಯ ನಮ್ಮ ಭಾರತಿ ಸ್ವಾರ್ಥವಿಲ್ಲದ
ಅಕಾಶದಂತೆ ಎಲ್ಲರಿಗೂ ಜೀವ ಹೋಗುವವರೆಗೂ ತಂಗುದಾಣವಾಗುವಳು ಅವಳಲ್ಲಿನ ಮಮತೆಯಂಚುತ ಮಾತೆಯಾಗಿ ಮಕ್ಕಳಿಗೆಲ್ಲಾ.
ಭಾರತಿ ಭಾವಿ ಭವಿಷ್ಯದ ಸಾರಥಿ ಸಾಹಿತ್ಯ ಸಂಪತ್ತಿನ ತುಂಬ ತುಂಬಿರುವ ದಿವ್ಯಹಾರತಿ
ನೋಮೊಸ್ತುತಿ ನೋಮೊಸ್ತುತಿ ಭಾರತಿ.
- ಚುಕ್ಕಿ
24 Jul 2017, 07:54 am
Download App from Playstore: