ಅವಳು ಅಳುವ ಮುನ್ನ

ಅವಳು‌ ಅಳುವ ಮುನ್ನ
ನಾ ಅವಳ ‌ನಗಿಸಲೇ ಬೇಕು!!
ಕಣ್ಣ ಹನಿಗಳ ಮೇಲೂ ಅವಳ
ಖುಷಿಯ ಬರೆಯಲೇ ಬೇಕು!!

ಇರುಳಿನಲ್ಲಿ ಭಯವ ತರುವ
ಆ ಕಪ್ಪು ಛಾಯೆ ಅಳಿಸ ಬೇಕು!!
ದೀಪದಂತೆ ಅವಳ‌ ಬದುಕಿಗೆ
ಬೆಳಕನು ನಾ ತೋರಬೇಕು!!

ಹಗಲಿನಲ್ಲಿ ನೆರಳಿನಂತೆ
ಅವಳಿಗೆ ಅಂಟಿ‌ ನಡೆಯಬೇಕು!!
ಒಂಟಿ ತನದ ದುಗುಡ ಅಳಿಸಿ
ಹಿತವನು ನಾ ನೀಡಬೇಕು!!

- ಪಿ.ಜಿ.ಜ್ಯೋತಿ

24 Jul 2017, 08:54 am
Download App from Playstore: