ಅಂಬಿಗನ ಗಾನ

ಕಡಲಿನಲಿ ಸಾಗುತಿಹ
ದೋಣಿಯಲಿ ಅಂಬಿಗನು
ಹರಿಗೋಲ ತಾ ಹಿಡಿದು
ಹಾಡುತಲಿ ಸಾಗಿಹನು!!

ಬಾನಿನಲಿ‌ ಹಾರುತಿಹ
ಹಕ್ಕಿಗಳ ಸಾಲೊಂದು
ಅಂಬಿನ ಧನಿ ಕೇಳಿ
ತಲೆದೂಗಿ ಬಂದಿಹವು!!

ಸೂರ್ಯನ‌ ರಶ್ಮಿಯದು
ನೀರಿನಲಿ ಹೊಳೆಯುತಲಿ
ಸಾಗಿಹುದು ಅಂಬಿಗನ
ಪಯಣದಿ ಒಡಗೂಡಿ!!

ನೀರಿನಲಿ‌ ಮೀನುಗಳು
ಹರುಷದಿ ಬಳುಕುತಲಿ
ಆಡಿ ನರ್ತಿಸುತಿಹವು
ಅಂಬಿಗನ ಗಾನ ಕೇಳಿ!!

- ಪಿ.ಜಿ.ಜ್ಯೋತಿ

24 Jul 2017, 09:31 pm
Download App from Playstore: