"ಮೌನಯಾತ್ರೆ"..

ಅಮವಾಸೆಯ ಆ ಕತ್ತಲ ವೇಳೆ,
ಗೆಳತಿಯ ಶುಭರಾತ್ರಿ ಸಂದೇಶ ಇನ್ನೂ ಬಾರದ ವೇಳೆ,
ಗೆಳೆಯನ ಕೈಯಿಂದ ಬಂತೊಂದು ಸಂದೇಶದ ಕರೆಯೋಲೆ,
ಸಂತಸದಿ ತೆಗೆದರೆ ಬರೀ ಖಾಲಿ ಹಾಳೆ.

ನೊಂದು ಬೇಸರದಿ ಮಲಗಿದ ವೇಳೆ,
ನಿದ್ರೆಯಲ್ಲಿ ಕೆಟ್ಟ ಸ್ವಪ್ನಗಳ ಸುರಿಮಳೆ,
ಕಣ್ಣುಬಿಟ್ಟು ನೋಡಿದರೆ ಇನ್ನೂ ರಾತ್ರಿ ವೇಳೆ,
ಕಿಟಕಿಯಲ್ಲಿ ಪಟಪಟ ಸದ್ದಿನ ಸುರಿವಮಳೆ.

ಮನದಲ್ಲಿ ಪ್ರೀತಿಯ ತುಸು ನೆನಪುಗಳ ಜಾತ್ರೆ,
ತುಂಬುವಷ್ಟರಲ್ಲಿ ನನ್ನ ಪ್ರೀತಿಯೆಂಬ ಅಕ್ಷಯಪಾತ್ರೆ,
ಬೆಳಗ್ಗೆದ್ದು ನೋಡಿದರೆ ಊರಲ್ಲಿ ಜನರ ಗುಂಪುಗಳ ಜಾತ್ರೆ,
ಮೂರ್ಖ ನಾ ತಿಳಿದೆ ನನ್ನ ಮನದಲಿ ಹೊರಟಿತೆನೊ ದೇವತೆಯ ಯಾತ್ರೆ...

ಕೇಳುತ್ತಿತ್ತು ವಾಧ್ಯದ ಸದ್ದಿನ ಹಾಡು,
ದೂರದಲ್ಲಿ ಯಾರೋ ಅಳುವ ಗೋಳು,
ನೋಡುವ ತವಕವು ಮನದ ಗೀಳು,
ಅಷ್ಟರಲ್ಲಿ ಸಂಜೆವೇಳೆಯ ಗೋಧೂಳು,

ಅಲ್ಲಿ ಅವಳ ಕಂಡೊಡೆ,
ಕಣ್ಣೀರು ಬಾರದೆ ಸುಮ್ಮನೆ ನಿಂತ ಆ ನನ್ನ ಕಣ್ಣುಗಳು,
ಅರಿವಾಗದೆ ಒಮ್ಮೆಲೇ ನನ್ನ ಆವರಿಸಿದವು ಮೂಕ ವೇದನೆಗಳು,
ನನ್ನ ಉಸಿರು ಬಿಗಿಯಾಗಿಸಿದ ಅವಳ ಆ ಯಾತ್ರೆ,

ಚಿರನಿದ್ರೆಗೆ ಜಾರಿದ್ದ ನನ್ನ ಪ್ರೀತಿ ದೇವತೆಯ
"ಮೌನಯಾತ್ರೆ"...

Spb..@#

- Spb...@#

25 Jul 2017, 07:25 pm
Download App from Playstore: