ತಿಳಿದಿದೆಯೇ ಚೆಲುವೆ( ಭಾಗ-೧)

‌‌ತಿಳಿದಿದೆಯೇ ಚೆಲುವೆ
ಏಳು ಅದ್ಭುತಗಳಲ್ಲಿ ನಿನ್ನ ಕಣ್ಣುಗಳು ಎಷ್ಟನೆಯದೆಂದು?
ತಿಳಿದಿದೆಯೇ ಚೆಲುವೆ
ಷಡ್ರಸಗಳಲ್ಲಿ ನಿನ್ನ ತುಟಿಗಳು ಎಷ್ಟನೇ ರಸವೆಂದು?
ತಿಳಿದಿದೆಯೇ ಚೆಲುವೆ
ದೇವಲೋಕದ ಅಪ್ಸರಸೆಗಳಲಿ ನೀನು ಎಷ್ಟನೆಯವಳೆಂದು?
ತಿಳಿದಿದೆಯೆ ಚೆಲುವೆ
ಸಪ್ತ ಸರೋವರಗಳಲಿ ನಿನ್ನ ಪ್ರೀತಿ ಎಷ್ಟನೆ ಸರೋವರವೆಂದು?

ಇವೆಲ್ಲವನೂ ತಿಳಿಸುವೆ ನಾನಿಂದು
ಇದೆಲ್ಲದರಲ್ಲೂ ನೀನೇ ಮಿಗಿಲೆಂದು......!!!!!

- ಅಕವಿ

26 Jul 2017, 09:13 pm
Download App from Playstore: