ಆತ್ಮ
ದೇಹವೆಂಬ ಪಂಜರದಲ್ಲಿ
ಬಂದಿಯಾಗಿರುವೆನು ನಾನು!!
ಪಂಜರಕ್ಕೆ ತಾಗುವ ಪ್ರತಿಯೊಂದು
ಪೆಟ್ಟು ನನ್ನನ್ನು ಕಂಪಿಸುತ್ತಿದೆ!!
ಆಂತರಿಕ ಆನಂದ ತೊರೆದು
ಪ್ರಾಪಂಚಿಕ ಮಾಯೆಯಲ್ಲಿ
ಮುಳುಗಿಹೋಗಿರುವೆ ನಾನು!!
ಆಸ್ತಿ ಅಂತಸ್ತಿನ ಪರದಾಟದಲ್ಲಿ
ನನ್ನ ನಾನು ಮರೆತಿರುವೆನೇನು!!
ಜಗದ ಎಲ್ಲಾ ಸುಖಗಳು ನನ್ನವಾದರೂ
ನನಗೆ ನಿಜವಾದ ಸಂತೋಷ ಲಭಿಸುವುದಿಲ್ಲ!!
ಏಕೆಂದರೆ ಇಷ್ಟುದಿನ ನನ್ನ ದೇಹದ
ನಿರಂತರ ಶ್ರಮಕ್ಕೆ ಬಿಡುವಿಲ್ಲದೆ ಬಿದ್ದ
ಕಷ್ಟಗಳಿಗೆ ನಾನು ನೊಂದಿರುವೆನು ನನ್ನೊಳಗೆ!!
ಈ ಪಂಜರವ ದಾಟಿ ಗಾಳಿಯಲ್ಲಿ ಗಾಳಿಯಾಗಿ ಸೇರುವ ತನಕ ವಿಶ್ರಾಂತಿ ಸಿಗಲಾರದು ನನಗೆ!!
ರೂಪವಲ್ಲದ ರೂಪದಲ್ಲಿ ಶಾಶ್ವತವಲ್ಲದ ದೇಹದಲ್ಲಿ ಅನಗತ್ಯ ನೋವಿನಲ್ಲಿ ಬದುಕುತ್ತಿರುವೆ ಈ ದೇಹಕ್ಕೆ ಹೆಸರೊಂದನಿಟ್ಟುಕೊಂಡು ಮನಸ್ಸಿಲ್ಲದ ಮಾನವರ ಜೊತೆಯಲ್ಲಿ ಆತ್ಮವಾಗಿ ನೊಂದು ನಾನಿಂದು!!
- ಚುಕ್ಕಿ
27 Jul 2017, 06:57 pm
Download App from Playstore: