ಚಲುವೆಯೆ ನೀನೇ ಹೇಳು

ಚಲುವೆಯೆ ನೀನೇ ಹೇಳು...
ನನ್ನೋಲವೆ ನೀನೇ ಹೇಳು...
ಯಾರಿಗೋ ಬೇಡವಾದ ನಾನು
ಪ್ರಿತಿಸುತ್ತಿರುವೆ ಏಕೆ ನೀನು
ಮನಬಿಚ್ಚಿ ಹೆಳುತಿರುವೆ ನಾನು
ನೀನಿಲ್ಲದ ಬಾಳು ಬೇಡ ನನಗಿನ್ನೂ. ...../

ನಿನ್ನ ಕಂಗಳ ಎಲ್ಲ ಕನಸುಗಳಿಗೆ
ಬಣ್ಣ ಬಳಿಯುವ ಆಸೆ ನನಗೆ..
ನಿನಾಡುವ ಪ್ರತಿ ನುಡಿಗಳಲಿ
ಸವಿಯನ್ನು ತುಂಬುವ ಆಸೆ ನನಗೆ..
ಸಂತೋಷ - ಸಲ್ಲಾಪ ಪ್ರತಿಗಳಿಗೆ
ಇರಲಿ ನಮ್ಮಿಬ್ಬರ ನಡುವೆ ಹೀಗೆ..
ನಯನದಿ ಕಂಬನಿಯ ಸಾಲು
ಕಂಡರೆ ನನ್ನುಸಿರಿಗೆ ಸಾವು..
ನಗುತಿರಬೆಕು ಎಂದು ನೀನು
ಅದೊಂದೇ ಆಸೆ ನನಗಿನ್ನೂ.../

ಮಡಿದ ನನ್ನ ಭಾವನೆಗಳಿಗೆ
ಮರುಜೀವ ತಂದ ಚಲುವೆ..
ವಿದಿಯಾಟವು, ದುರಾದೃಶ್ಟವೋ
ಸಿಲುಕಿರುವೆ ನಾ ನೋವಿನ ಸುಳಿಗೆ..
ನಿರಾಸೆ - ಹತಾಶೆ ನನ್ನ ಜೊತೆಗೆ
ನೀ ಬಂದ ಮೇಲೆ ನವಜೀವನ ನನಗೆ..
ಪ್ರೀತಿಯ ದೇವತೆಯೇ ನಿನ್ನ
ಹೃದಯದಲ್ಲಿಟ್ಟು ಪೂಜಿಸುವೆ ಇನ್ನ..
ಹೂ-ಮನದ ಹುಡುಗಿ ನಿನ್ನ
ನೋವಾಗದ ಹಾಗೇ ಕಾಪಾಡುವೆ ಇನ್ನ..

ಚಲುವೆಯೆ ನೀನೇ ಹೇಳು.....

- ಕುಮಾರ ಸಿದ್ದರಾಜ

30 Jul 2017, 03:12 pm
Download App from Playstore: