ಮೇಘವೆ ಎಲ್ಲಿ ಓಡುವೆ....

ಮೇಘವೆ ಮೇಘವೆ ಎಲ್ಲಿ ಓಡುವೆ
ನೋಡ ನೋಡುತ್ತಿದ್ದಂತೆಯೆ ಮರೆಯಾಗಿಬಿಡುವೆ
ಕಣ್ಣ ಮುಚ್ಚಾಲೆ‌ಯಾಡುತ ಕಾಡುತಿರುವೆ
ಈ ನಿನ್ನ ನೀತಿಯ ರೀತಿಯು ತರವೆ
ಕಣ್ಣೀರ‌‌ ಕೊಟ್ಟು ನಗುತಿರುವೆ ಇದು ‌‌ನ್ಯಾಯವೆ

ಸುರಿದರೆ‌ ಮಳೆಯು ಬಿಡದೆ ಸುರಿದು ತರುವೆ ಪ್ರವಾಹ
ನೀರ ಪಾಲು ಜೀವಗಳು, ಉಳಿಯಲು ಶಕ್ತವಾದವರ ವಿನಹ
ಹನಿ ನೀರು ಇಲ್ಲ ಇನ್ನೆಲ್ಲೊ, ತುಂಬಿದೆ ಬರ ಅಲ್ಲಿ ಎಲ್ಲೆಲ್ಲೂ

ಉಳ್ಳವರಷ್ಟೆ ಉಂಡು ಬದುಕುಳಿಯಬಲ್ಲರು
ಹುಡುಕಾಡುತಿರುವರು ತುತ್ತಿಗಾಗಿ ಇಲ್ಲದವರು
ತುತ್ತು‌ ಅನ್ನ, ಹನಿ ನೀರು ಸಿಗದವರು ಮಣ್ಣಾದರು

ಬಾಯಿ ಬಿರಿದು ಕಾಯುತಿರುವಳು ಭುವಿಯು ಒಂದೆಡೆ
ತನ್ನೊಡಲಿಗೆ ಸಿಕ್ಕಿದ್ದೆಲ್ಲ ಸೆಳೆಯುತಿರುವಳು ಇನ್ನೊಂದೆಡೆ
ನಿನ್ನದು ಮುಗಿಯದ ಕರುಣೆ ಇಲ್ಲದ ಅಟ್ಟಹಾಸ ಎಲ್ಲಾ ಕಡೆ

- ಶ್ರೀಕಾವ್ಯ

30 Jul 2017, 06:14 pm
Download App from Playstore: