ಕಂಬನಿಯ ಮಿಡಿತವಿದು ಕೇವಲ ಸಾಲಲ್ಲ

ಕಂಬನಿಯ ಮಿಡಿತವಿದು ಕೇವಲ ಸಾಲಲ್ಲ
ನೀನಿರದ ಜೀವನ ನನಗಿನ್ನು ಬೇಕಿಲ್ಲ
ಅನುದಿನವು ಜಪಿಸುತಿದೆ ಮನ ನಿನ್ನ ಹೆಸರ
ನಿನಗಾಗಿ ಉಳಿಸಿರುವೆ ನನ್ನ ಕಡೆಯುಸಿರ

ಜೊತೆಗಿರಲಿ ಇರದಿರಲಿ ನಿನದೆನ್ನ ಬದುಕು
ಜೀವನದ ಕತ್ತಲೆಗೆ ನೀ ತಾನೆ ಬೆಳಕು
ಉಸಿರಿರಲಿ ಇರದಿರಲಿ ನಿನ್ನದೀ ಜೀವ
ದಯವಿಟ್ಟು ನೀಡದಿರು ಇದಕೆ ನೀ ನೋವ

- ನಾಗು

31 Jul 2017, 04:40 pm
Download App from Playstore: