ಚಂದನಾ

ಆ ಬಣ್ಣ ಗಂಧಶ್ರೀಗಂಧಕ್ಕೆ ಹೋಲಿಸಲೆ
ಇಲ್ಲ ಚಂದ್ರನಿಗೆ ಸಮಗೊಳಿಸಲೆ
ಕಾಣೆ ಯಾವುದಕ್ಕೆ ತೃಪ್ತಿಪಡಲೆ

ಕೋಲಾರ ಕೆಂಬಣ್ಣಿನ್ನಿಂದ ಚಿತ್ರಿತಳೆ
ಇಲ್ಲಾ ಸೂರ್ಯ ಮೈ ಬಣ್ಣದಿಂದ ರಚಿತಳೆ
ಕಾಣೆ ಆ ಬೆಡಗ ಹೊಂದಿದವಳೆ

ಬೆಳ್ಳಕ್ಕಿಯ ಜಾತಿಯೋ
ಇಲ್ಲಾ ಬೆಳ್ಳಿಯ ಸಾಥಿಯೋ
ಕಾಣೆ ಅದ್ಯಾವ ಪ್ರತಿಯೋ

ಕುಂಕುಮ ಹಳದಿ ಚಂದನ
ಇಲ್ಲಾ ನೀನೇ ಅಂಧನ
ಕಾಣೆ ಈ ಬಂಧನ

ಸಂಪಿಗೆ ಕೆಂಪವೋ
ಇಲ್ಲಾ ಜಾಜಿಯ ಶ್ವೇತವೋ
ಕಾಣೆ ಅದ್ಯಾವ ಮಧುರ ಕುಸಮವೋ
ಹಿರೇಉಳ್ಳಿಗೇರಿ ಕರೆಮ್ಮ.

- MB

31 Jul 2017, 04:40 pm
Download App from Playstore: