ಮಾವಯ್ಯ
ಬೆಳ್ಳನೆಯ ಕೂದಲಿರೋ
ಕುಡಿ ಮೀಸೆ ಮಾವಯ್ಯ
ನಿನ್ನನ್ನು ವರಿಸಲಾರೆ
ನಾನಿನ್ನೂ ಕಂದಮ್ಮ!!
ಚಂದಮಾಮ ಕಾಣಲು
ನಿನ್ನ ಮಡಿಲಲ್ಲಿ ಮಲಗಿದ್ದೆ
ಸಂತೆಯ ಬೀದಿಯಲ್ಲಿ ನಾ
ನಿನ್ನ ಹೆಗಲೇರಿ ಸಾಗಿದ್ದೆ!!
ಊರೂರು ಅಲೆವಾಗ ನಿನ್ನ
ಬೆರಳ ಹಿಡದು ನಡೆದಿದ್ದೆ
ತಂದೆಯಂತೆ ನೀನು ನನಗೆ
ಭಾಸವಾಗಿ ಹೋದೆ!!
ತಲೆ ಎತ್ತಿ ನೋಡಿದರೆ
ನಿನ್ನ ಕಿರುಗಡ್ಡ ಕಾಣಿವುದು
ಮುಗಿಲೆತ್ತರಕ್ಕೆ ನೀನು
ನಾನಿನ್ನೂ ಎಳೆ ಕೂಸು!!
ಪುಟ್ಟದಾದ ಮನಸು ನನ್ನದು
ನಾನಿನ್ನೂ ಕಂದಮ್ಮ
ನನ್ನನ್ನು ವರಿಸುವ ಆಸೆ
ಏಕೆ ನಿನಗೆ ಮಾವಯ್ಯ!!
- ಪಿ.ಜಿ.ಜ್ಯೋತಿ
31 Jul 2017, 07:14 pm
Download App from Playstore: