ಕನಸಿನ ಅಂಧಕಾರ

ಭಯದಲ್ಲರಳಿದ ಕಣ್ಣುಗಳು,
ನೀರಳ ಮೌನ,
ಆಗಾಗ ಕಿವಿಗೆ ತಗುಲುತ್ತಿರುವ ಮಂದಗಾಳಿ,
ಕೈ ಕಾಣದಷ್ಟು ಕತ್ತಲು,
ಯಾವುದೊ ಸದ್ದಿಗೆ ನಡುಗುವ ಹೃದಯ,
ಅತ್ತಿತ್ತ ಕತ್ತಲಲ್ಲಿ ಹುಡುಕಾಟ ಶುರುವಾಗಿತ್ತು,
ಯಾರೋ ಇದ್ದಂತೆ ಪಕ್ಕದಲ್ಲೆ,
ಉಸಿರಾಟ ಜೋರಾಯಿತು,
ಭಯವು ಬೆವರಲ್ಲಿ ಬೆರೆತು ಹೋಯಿತು,
ಇದೆಂತ ಅಂಧಕಾರ,
ಇನ್ನೆನೆಲ್ಲವು ಹೆಚ್ಚಾಯಿತು,
ಬಿದ್ದೆ. ದೇಹಕ್ಕೆ ಪೆಟ್ಟಾಯಿತು,
ಮೆಲ್ಲನೆ ಕಣ್ಣು ಬಿಟ್ಟೆ, ನಮ್ಮನೆ!
ಕಂಡದ್ದು ಕನಸೆಂದು ಸಮಾಧಾನಿಸಿದರು
ಮನಸ್ಸು ಭಯದಲ್ಲಿತ್ತು,
ಮತ್ತೆ ನಿದ್ದೆ ಮಾಡಿದ ನೆನಪಿಲ್ಲ..

ಆ ಕನಸಿನ ರಾತ್ರಿಗಳು
ಮತ್ತೆ ಮತ್ತೆ ಮರುಕಳಿಸುವವು,
ಅವುಗಳೆ ಜೀವನದ ಕಷ್ಟ-ಕಾರ್ಪಣ್ಯಗಳು,
ಮೆಟ್ಟಿ ನಿಂತರೆ ಜಯದ ಶಿಖರ,
ಬೆಚ್ಚಿ ಕುಂತರೆ ಸೋಲು ನಿಖರ,
ಜಯಭೇರಿ ಬಾರಿಸಿ ಗೆಳೆಯರೆ,
ಸಾಧ್ಯವಾದರೆ ಪಕ್ಕದವನ ಕಷ್ಟಕ್ಕು ಹೆಗಲು ಕೊಡಿ,
ಅಂಜಿಕೆ ಬಿಡಿ,
ನೀವಾಗ ಬೆಳೆಯುವಿರಿ,
ಜಗವಾಗ ಬೆಳಗುವುದು...!

(ಮನೋಜ್)

- manoj kumar

01 Aug 2017, 10:48 am
Download App from Playstore: