ಅಪ್ಪಿ
ಅಪ್ಪಿ ನಿನ್ನ ಮುದ್ದಿಸಲೇ
ಮಗುವಂತೆ ಮಡಿಲಲಿ ಮಲಗಿಸಲೆ
ಮನಸೊಳಗೆ ನಿನ್ನ ಬಚ್ಚಿಡಲೆ
ಇಲ್ಲ ಕಾವಲಿಗೆ ನಿಂತಂತೆ ಕಾಯಲೆ
ಜೋಕಾಲಿಯ ಕಟ್ಟಿ ಕೂರಿಸಿ ತೂಗಲೆ
ಹಾರುವ ಮುಂಗುರುಳ ನೋಡಿ ಮೈಯ ಮರೆಯಲೆ
ನೀ ನುಡಿವಾಗ ಮೌನಿಯಾಗಬಿಡಲೆ
ನೀ ನನ್ನನೆ ನೋಡುತಲಿರಲು ಮರುಳನಾಗಲೆ
ನೀ ನನ್ನ ಸೋಕಿದಾಗ ಶಿಲೆಯಾಗಿ ಬಿಡಲೆ
ನನ್ನ ಕೈ ಹಿಡಿದು ನೀ ನಡೆಸುವಾಗ ಮಗುವಾಗಲೆ
ಕಣ್ಣು ತುಂಬಿ ನಿಂತಾಗ ತಾಯಿ ಮಡಿಲ ನಾ ಕೊಡಲೆ
ಹುಸಿ ಮುನಿಸ ತೋರಲು ನೀನು, ಎತ್ತವನಂತೆ ರೇಗಿಬಿಡಲೆ
ಹೇಳು ಬಾರೆ ನನ್ನ ಕನಸುಗಳ ಸಾಲೆ
ನಿನಗಾಗಿ ಕಟ್ಟಿರುವೆ ಪ್ರೀತಿಯ ಮಾಲೆ
- ಶ್ರೀಕಾವ್ಯ
01 Aug 2017, 02:06 pm
Download App from Playstore: