ಮರುಭೂಮಿಯಲ್ಲಿ

ಮರುಭೂಮಿಯಲ್ಲಿ
ದಿಕ್ಕು ಕಾಣದ ಹೊತ್ತಲಿ!!
ಎದಿರು ಸಿಕ್ಕ‌ನು ಒಬ್ಬ
ದಾರಿ ತಪ್ಪಿದ ಗೆಳೆಯನು!!

ಅವನ ಅಕ್ಕರೆಯ ಮಾತಿಗೆ
ನಕ್ಕು ಮರುಳಾದ ಮನಸಿದು!!
ಸೋತು ಹೋದೆ‌ನೇ ನಾನು
ಅವನ ಮಾತಿನ ಮೋಡಿಗೆ!!

ಜಾರಿ ಬಿದ್ದಿತೇ ಮನಸು
ಅವನ ಅಂದಕೆ ಸೋತು!!
ಚಂಚಲಗೊಂಡು ಹಾರಿತೇ ಮನ
ಮುಗಿಲೆತ್ತರಕ್ಕೆ ರೆಕ್ಕೆ ಬಡಿದು!!

ಅಯ್ಯೋ ಮೋಡದೊಡನೆ
ಆ ಸಂಭ್ರಮ ಹೇಳ ತೀರದು!!
ಮರಳಿ ಬುವಿಗೆ ಬರಲು
ಮನಕೆ‌ ದಾರಿ ತಿಳಿಯದು!!

ದೂರದ ಮರಳು ದಿಬ್ಬದ ಮೇಲೆ
ಕಂಗೆಟ್ಟು ನಿಂತಿದ್ದಳು ಒಬ್ಬಳು!!
ಅವಳ ಕಂಡೊಡನೆ ಅವನ‌‌ ಕಣ್ಣರಳಿ‌
ಓಡಿ ತಬ್ಬದ ಅವಳ ತನುವನು!!

ಎದಿರು ಸಿಡಿಲು ಬಡಿದಂತೆ
ನಾನು ಕಂಗೆಟ್ಟು ನಿಂತೆ!!
ಮುಗಿಲಿನಿಂದ ಜಾರಿ ಬುವಿಗೆ
ಉರುಳಿದ ಮನದ ಭಾವ ಛಿದ್ರ!!

ಅವಳು ಅವನ ಪ್ರಾಣಕಾಂತೆ
ನಾನು ಏಕಾಂಗಿಯಾಗಿ ನಿಂತೆ!!
ಸುಮ್ಮನೆ ಸಲ್ಲದ ಕನಸ ಹೆಣೆದು
ಯಾಕೆ ತಲ್ಲಣಗೊಂಡಿತು ಮನಸು!!

- ಪಿ.ಜಿ.ಜ್ಯೋತಿ

01 Aug 2017, 03:35 pm
Download App from Playstore: