ಪ್ರೇಮ ಚಂದ್ರಮ
ಹೇಳೋ ಚಂದ್ರಮ
ಆ ಬಾನು ಚಂದವೇ
ಪ್ರೀತಿಯಲ್ಲಿ ಬಿದ್ದ ಮೇಲೆ
ನೀನು ಚಂದವೇ!!
ನನ್ನ ಮನದ ಹೂವಿನ ತೋಟ
ಕಂಡು ಬಂದ ಚಂದ ಮಾಮ
ಹೂವಿನಲ್ಲಿ ಅವನಿಗೆ
ಎನೋ ಅನುರಾಗವು!!
ರಾಶಿ ರಾಶಿ ಕನಸಿನ ಹೂವು
ಅರಳಿ ನಿಂತ ಚಂದವ ಕಂಡು
ಬಾನ ಮರೆತ ಚಂದಿರನು ತಾ
ಮನದಿ ಬಂದು ನೆಲೆಯುರಿದ!!
ತಾರೆಗಳ ಬಂಧವ ಕಳಚಿ
ಮನದ ಹೂವಿನ ಮೋಹವ
ಬೆಳೆಸಿ ಆಸೆಯಿಂದ ಬಂದನು
ಇಲ್ಲಿ ಪ್ರೇಮ ಚಂದ್ರಮ!!
- ಪಿ.ಜಿ.ಜ್ಯೋತಿ
01 Aug 2017, 04:11 pm
Download App from Playstore: