ನನ್ನವಳ ನೆನಪು

( ನನ್ನವಳು ನೆನಪು )

ಕಡಲಿನೊಳಗೆ ಅಡಗಿ ಕುಳಿತಿರುವ
ಚಿಪ್ಪಿನೊಳಗಿನ ಮುತ್ತು ನನ್ನವಳು.
ಹೊಳೆಯುವಂತಃ ಹೆಣ್ಣಿವಳು.
ಬೆಳ್ಳಿ ಚುಕ್ಕಿಯಂತಃ ಕಣ್ಣಿನವಳು.
ಹಕ್ಕಿಯಂತೆ ಹಾರುವಳು // ನನ್ನವಳು //

ಕಿವಿಯಲ್ಲಿ ಓಲೆ ಕೊರಳಲ್ಲಿ ಮಾಲೆ
ಕಾಲಲ್ಲಿ ಕಾಲ್ಗೆಜ್ಜೆ ತೊಟ್ಟು . ಪುಟ್ಟ ಹೆಜ್ಜೆ ಇಟ್ಟು
ನಲಿದವಳು.
ನವಿಲಿನಂತೆ ಗರಿಬಿಚ್ಚಿ ಕುಣಿದವಳು.

ಮಿಂಚಿನಂತೆ ಮರೆಯಾಗುವಳು.
ಗುಡುಗಿನಂತೆ ಬಾನಲ್ಲಿ ಗುಡುಗಿ ಮಳೆಹನಿಯಂತೆ ಧರೆಯಲ್ಲಿ ಧುಮುಕಿ ನನ್ನ ಮನಸ್ಸಲ್ಲಿ ತಣ್ಣೀರನ್ನು ಪನ್ನೀರಾಗಿಸಿದವಳು.

ನನ್ನ ಹ್ರುದಯಾನ ಕದ್ದು. ಮನಸ್ಸನ್ನು ಗೆದ್ದು.
ಪ್ರೀತೀನ ಚೆಲ್ಲಿದವಳು ಜೀವನವನ್ನು
ನನ್ನೊಂದಿಗೆ ಹಂಚಿಕೊಂಡವಳು.//ನನ್ನವಳು

ಚಂದಿರನ ಮಗಳಿವಳು.ಈ ಸುಂದರನ ಕೈ ಇಡಿಯಲು ಧರೆಯಲ್ಲಿ ಜನಿಸಿದವಳು.
ನನ್ನ ಉಸಿರಲ್ಲಿ ಬೆರೆತವಳು.
ನನ್ನ ಮನದಲ್ಲಿ ಅರಳಿದ ಕಮಲದಂತೆ‌ ಹೊಳೆಯುವಂತ ಹೆಣ್ಣಿವಳು..//ನನ್ನವಳು//

( ಸಂತೋಷ್ // ಜೀತು )

- ಸಂತೋಷ್//ಜೀತು

02 Aug 2017, 08:32 am
Download App from Playstore: