ಹೆಗಲ ನೀಡು
ಹೆಗಲ ನೀಡು ಒಮ್ಮೆ ನೀ
ಒರಗಿಕೊಳ್ಳುವ ಮನಸಿದೆ!!
ಭಯವಾಗಿದೆ ನನಗೆ
ನೀನು ಸನಿಹ ಇರದೇ!!
ಮೃದು ಮನಸಿನ ಮೇಲೆ
ಬರೆ ಎಳೆದರು ಯಾರು!!
ಮರುಗುತಿಹುದು ಮನವು
ನಿನ್ನನು ನೆನೆದು!!
ಸಾಕಾಗಿದೆ ಈ ವಿರಹ
ನಾನು ಇರೆನು ನಿನ್ನ ವಿನಹ!!
ನನಗೆ ಯಾಕೆ ಇಂತಹ ಶಿಕ್ಷೆ
ನೀಡು ನೀನು ಪ್ರೇಮ ಭಿಕ್ಷೆ!!
ನಿನ್ನ ಪ್ರೇಮಕೆ ಕಾದು ಹಸಿದು
ಕುಳಿತಿಹುದು ನನ್ನ ಹೃದಯ!!
ಈ ದೂರವು ಸಾಕಾಗಿದೆ
ನಿನ್ನ ಸೇರಲು ನಾ ಕಾದಿಹೆ!!
ಒಂಟಿ ತನದ ನೋವ
ಹೊರ ನೂಕಿದೆ ಕಣ್ಣು!!
ಕಂಬನಿಯು ತಾ ಆರದೇ
ಕಾದು ಬೇಡಿದೆ ನಿನ್ನ ಹೆಗಲ!!
- ಪಿ.ಜಿ.ಜ್ಯೋತಿ
02 Aug 2017, 10:32 am
Download App from Playstore: