ಹೇಳು ಗೆಳತಿ
ಹೇಳು ಗೆಳತಿ ನೀ ಹೇಳು
ಯಾಕಾಗಿ ನೀ ಬಂದೆ
ಈ ನನ್ನ ಹೃದಯದೊಳಗೆ..
ಅರೆಗಳಿಗೆ ಬಿಟ್ಟಿರಲಾರದಷ್ಟು
ಪ್ರೀತಿ ತುಂಬಿರುವೆ ನೀ
ನನ್ನ ಮನಸೊಳಗೆ...
ನನ್ನುಸಿರಿನ ಅಲೆಗಳಲಿ
ನಿನ್ನುಸಿರ ಬೆರೆಸುವಾಸೆ...
ನಿನ್ನ ಪ್ರೇಮದ ಮಡಿಲೊಳಗೆ
ನಾ ಮಲಗಿ ಕನಸ ಕಾಣುವಾಸೆ...
ನೀ ಒಲಿದ ಮೇಲೂ
ನನ್ನಲ್ಲಿ ಅದೆಂಥ ಕಲ್ಪನೆಗಳು
ಕಾರಣ ನೀ ಕೊಡುವ
ಆ ಹುಚ್ಚುಚ್ಚು ಕಿರುನಗೆಗಳು...
- ಧರ್ಮರಾಜ್
02 Aug 2017, 10:44 am
Download App from Playstore: