ನೆತ್ತರ ಗಡಿಗೆ
ಈ ನನ್ನ ಹೃದಯ ಎಂಬ
ಬಿಸಿ ನೆತ್ತರ ಗಡಿಗೆಯಲ್ಲಿ
ಮುಗ್ಧವಾಗಿ ಈಜುತ್ತಿರುವ
ಪುಟ್ಟ ಮೀನು ನೀನು!!
ಆಲಿಸಿ ಕೇಳಿಸಿಕೊ ನೀನು
ಪ್ರತಿ ಮಿಡಿತದ ಸಂದೇಶವ
ಅದು ಬಯಸುವುದು
ಎಂದೂ ನಿನ್ನ ಹಿತವ!!
ಈ ಹೃದಯದ ಗಡಿಗೆಯಲ್ಲಿ
ನಿನ್ನ ಜೋಪಾನವಾಗಿ ನಾನು
ಕಾದಿರುವೆನು ನೀ ಮಿಡುಕಾಡಿ
ನನ್ನ ನೋಯಿಸಬೇಡ!!
ಈ ಹೃದಯದ ಗಡಿಗೆಯಿಂದ
ದೂರಾಗುವ ಪ್ರಯತ್ನ ನೀ
ಮಾಡಿದರೆ ನಾ ಅಸುನೀಗಿ
ಮಣ್ಣು ಸೇರುವೆ ಒಲವೇ!!
- ಪಿ.ಜಿ.ಜ್ಯೋತಿ
02 Aug 2017, 11:05 am
Download App from Playstore: