ಮಡದಿ
ಪೆಟ್ಟಿ ಅಂಗಡಿ ಗೋಬಿಯವ ಮಾಡಿದ
ಮಸಾಲೆ ಆರೋಗ್ಯಕ್ಕೆ ಹಾನಿಕರ,
ಮಡದಿ ಮಾಡಿದ ಮಸಾಲೆ ಮೈಂಡಿಗೆ ಹಾನಿಕರ,
ಮನೆಯಲ್ಲಿರುವ ಸೌಟುಗಳ ಸಾಕ್ಷಿಗಾಗಿ
ಗಂಡನ ಬೋಳು ತಲೆಯಲ್ಲಿ ಅಚ್ಚೆ ಮೂಡಿಸಿದವಳು,
ಯಾವ ಎಕ್ಸ್‌ಪ್ರೆಸ್ ರೈಲು ಕೂಡ
ಸೋಲಿಸಲಾಗದ ಮಾತಿನವಳು,
ಮಂಡವೆ ಆಗದ ಮೊಂಡು ಧೈರ್ಯದವಳು,
ಜೀವನದುದ್ದಕ್ಕು ಗಂಡನಾದವನೊಂದಿಗೆ ಏಗುವಳು,
ಅವನು ಸತ್ತ ಮೇಲೆ ಸತ್ತರೆ ಮುಂಡೆ ಎನಿಸಿಕೊಳ್ಳುವಳು,
ಅವನು ಬದುಕಿರುವಾಗಲೆ ಅವಳು ಸತ್ತರೆ ಮುತ್ತೈದೆ ಎನಿಸಿಕೊಳ್ಳುವಳು,
ಮನಬಂದಂತೆ ಆಡಿಕೊಳ್ಳುವರ ಬಾಯಿಗೆ ಹಸುವಿನ ಗಂಜಳ ಹೊಯ್ದು ಶುದ್ದಿಸಲಿ,
ಏನೆ ಆದರೂ ಅವಳು ತಾಯಿ ಹೃದಯದವಳು,
ಗಂಡಿನ ಬೆನ್ನೆಲುಬವಳು, ಮಡದಿಯವಳು...!
(ಮನೋಜ್)
- manoj kumar
02 Aug 2017, 01:52 pm
Download App from Playstore: