ಒಂಟಿ ಕಾಲಿನ ಗೆಜ್ಜೆಯ ದನಿ

ಒಂಟಿ ಕಾಲಿನ ಗೆಜ್ಜೆಯ ದನಿಯ
ಸದ್ದದು ಹೃದಯದ ಕೋಣೆಯಲಿ!!
ಮೆಲ್ಲಗೆ ಮೆಲ್ಲಗೆ ಹೆಜ್ಜೆಯನ್ನಿಟ್ಟರೂ
ಮೊಳಗುವುದೋಂದೇ ನಾದದಲಿ!!

ಅವಳದೇ ಕಂಗಳ ಹುಣ್ಣಿಮೆ ಬೆಳಕಲಿ
ಕಳೆಯಲು ಕಾದೆನು ನಾ ಇರುಳ!!
ಬಣ್ಣದ ಬಣ್ಣದ ಕನಸನು ಹೆಣೆಯುತ
ಕಾದಿತು ಮನವು ಅನುರಾಗದಲಿ!!

ಅವಳನೇ ನೋಡಲು ಕಾದಿದೆ ಕಂಗಳು
ರೆಪ್ಪೆಯ ಮುಚ್ಚದೇ ಹಗಲಿರುಳು!!
ಸಕ್ಕರೆ ಗೊಂಬೆಯು ನಕ್ಕರೆ ಸ್ವರ್ಗವು
ಹೇಳದೇ ಬಳಲಿದೆ ನನ್ನ ಒಲವ!!

ಎದುರಿಗೆ ಬಂದರೆ ಹೆದರುವ ಅದರವು
ತೊದಲದೇ ನಿಂತಿತೇ ಅವಳೆದುರು!!
ಅವಳದೇ ದನಿಯನು ಕೇಳಿದ ಮೇಲೆ
ನಿಂತಿತೆ ಹೃದಯದಿ‌ ಗೆಜ್ಜೆಯ ದನಿಯು!!

ಅವಳದೇ ನಲ್ಲನ ಪರಿಚಯ ಮಾಡಿಸ
ಬಂದಳೇ ಅವಳು ನನ್ನೆದುರು!!
ಅವರನು ಕಂಡು ಆಘಾತಗೊಂಡು
ಹರಿಯಿತು ಗೆಜ್ಜೆಯು ತಾ ನೊಂದು!!

- ಪಿ.ಜಿ.ಜ್ಯೋತಿ

02 Aug 2017, 03:09 pm
Download App from Playstore: