ಸಂಪಿಗೆ

ಜಡೆ ಎಂಬ ಉಯ್ಯಾಲೆಯಲ್ಲಿ
ತೂಗಾಡುತ್ತಿರುವ ಸಂಪಿಗೆ!!
ನಿನ್ನ ಪರಿಮಳದ ಕಂಪಿಗೆ
ಮನಸೋತಳೇ ಅವಳು ಸಂಪಿಗೆ!!

ಸೊಂಪಾದ ಕೂದಲಲ್ಲಿ
ಜೊಂಪಾಗಿ ಕುಳಿತ ಕೆಂಡ ಸಂಪಿಗೆ!!
ನಿನ್ನ ನುಣುಪಾದ ದಳಗಳು
ಅವಳ ಕೆಂಪಾದ ಕೆನ್ನೆಯ ಹಾಗಿದೆ!!

ಶಿರವೇರುವ ವರ ಪಡೆದಿಹ
ಸಿಂಗಾರದ ಪುಷ್ಪ ನೀ ಸಂಪಿಗೆ!!
ಪರಿಮಳಿಸುವ ಪರಿ ಹರಡುವ
ಸುಂದರ ಪುಷ್ಪ ನೀ ಸಂಪಿಗೆ!!

- ಪಿ.ಜಿ.ಜ್ಯೋತಿ

02 Aug 2017, 04:23 pm
Download App from Playstore: