ಮೋಡದ‌ ಚಿಲುಮೆಯಡಿ

ಮೋಡದ ಚಿಲುಮೆಯಡಿ
ಮೂಡಿಹುದು ಬೆಳಕೊಂದು
ಚಲ್ಲುತಿರುವನೇ ಬೆಳಕ
ಚಂದಿರನು ಅಲ್ಲಿ ನಿಂದು!!

ಸಂಜೆಯಲಿ ಸುಂದರನು
ನಗು ನಗುತ ನಿಂದಿಹನು
ಯಾರನೋ ಕಾಣಲು ಬಂದು
ಮರೆಯಲಿ ಅವಿತಿಹನು!!

ಸುಳ್ಳು ಹೇಳಿ ಸರಸ ಆಡುವ
ಚತುರ ಚಂದಿರನು ಅವನು
ಬಾನಿನಿಂದ ಬಾಣ ಹೂಡಿ
ಯಾರ‌ ಹೃದಯ ಗೆಲ್ಲುವನು!!

- ಪಿ.ಜಿ.ಜ್ಯೋತಿ

02 Aug 2017, 04:37 pm
Download App from Playstore: