ಹರೆಯದ ಅರಳು ಮರಳು
ಹರೆಯದಲಿ ಅರಳು ಮರಳು
ಶುರುವಾಯಿತು ನಿನ್ನ ಕಂಡು!!
ದಿನವೆಲ್ಲ ಇರಿಸು ಮುರಿಸು
ಮನಸಿನಲಿ ನೀನು ಬಂದು!!
ಹಗಲಿನಲ್ಲಿ ಹಗಲು ಕನಸು
ಕಾಣುತಿಹುದು ನನ್ನ ಮನಸು!!
ಕನಸಿಗಿಲ್ಲ ಯಾವ ಬೇಲಿ
ಜಾರಿ ಬಿತ್ತು ನನ್ನ ವಯಸು!!
ಸೂತ್ರ ಹರಿದ ಗಾಳಿ ಪಟದಂತೆ
ಎಲ್ಲಿಯೋ ಹಾರಿ ಹೋದಂತೆ!!
ಸೂತ್ರ ಹಿಡಿದು ನನ್ನ ಸೇರು
ತಿರುಗಿ ಬರಲು ದಾರಿ ತೋರು!!
ರಾತ್ರಿಯಲಿ ನಿದಿರೆ ಇಲ್ಲ
ಕಣ್ಣ ಎದುರು ನೀನೇ ಎಲ್ಲ!!
ಬಂದೆ ನೀನು ಮನದ ಮನೆಗೆ
ಒರಗಿ ಕೊಳ್ಳಲೇ ನಿನ್ನ ಎದೆಗೆ!!
- ಪಿ.ಜಿ.ಜ್ಯೋತಿ
03 Aug 2017, 09:27 am
Download App from Playstore: