ಉಬ್ಬಿದ ಉದರದಲಿ

ಉಬ್ಬಿದ ಉದರದಲಿ
ಇರುವುದು ಕಂದಮ್ಮ!!
ಹಬ್ಬದ ಸಡಗರವು
ತಾಯ ಮಡಿಲಿನಲಿ!!

ಹೆಸರೇನು ನಾ ಇಡಲಿ
ಹೇಗೆ ನಾ ಮುದ್ದಿಸಲಿ!!
ಮಗನಾಗೋ ಮಗಳಾಗೋ
ಬಾ ನೀನು ಕಂದಮ್ಮ!!

ಹೆದರದೇ ನಾ ಹೆರುವೆ
ಅಳಬೇಡ ಕಂದಮ್ಮ!!
ನೋವನು ನಾ ನುಂಗಿ
ಜನುಮ ನೀಡುವೆ ನಿನಗೆ!!

ಈ ನನ್ನ ಅಂಗೈಯು
ನಿನ್ನ ಬರುವ ಕಾದಿಹುದು!!
ಮಮತೆಯು ಕಡಲಿನಂತೆ
ಹೃದಯದಲಿ ಉಕ್ಕಿಹುದು!!

ಮುದ್ದಿಸಲು ನಾ ನಿನ್ನ
ಕಾತುರದಿ ಕಾದಿರುವೆ!!
ನವ ಮಾಸ ಕಳೆದೊಡನೆ
ನವ ಭಾವ ನೀ ತುಂಬು!!

- ಪಿ.ಜಿ.ಜ್ಯೋತಿ

03 Aug 2017, 01:18 pm
Download App from Playstore: